Sunday, January 19, 2025
ಬಂಟ್ವಾಳಸುದ್ದಿ

ಬಂಟ್ವಾಳ : ನಂದಾವರದಲ್ಲಿ ಮನೆಯೊಂದರ ಮೇಲೆ ಕುಸಿದ ಗುಡ್ಡ : ಮಹಿಳೆ ಸಾವು – ಕಹಳೆ ನ್ಯೂಸ್

ಬಂಟ್ವಾಳ : ತಾಲೂಕಿನ ಸಜೀಪಮುನ್ನೂರು ಗ್ರಾಮದ ನಂದಾವರ ಗುಂಪು ಮನೆಯಲ್ಲಿ ಮನೆಯೊಂದರ ಮೇಲೆ ಗುಡ್ಡ ಕುಸಿದು ಬಿದ್ದು ಮಹಿಳೆಯೋರ್ವರು ಮೃತಪಟ್ಟು, ಯುವತಿಯೋರ್ವಳು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಮನೆಯೊಳಗೆ ಸಿಲುಕಿ ಹಾಕಿಕೊಂಡಿದ್ದ ಇಬ್ಬರು ಮಹಿಳೆಯರ ಪೈಕಿ ಓರ್ವ ಮಹಿಳೆಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಣ್ಣಿನೊಳಗಿದ್ದ ಮಹಿಳೆಯನ್ನು ರಕ್ಷಣೆ ಮಾಡಲು ಮಾಡಿದ ಸತತ ಪ್ರಯತ್ನ ವಿಫಲವಾಗಿದೆ. ಮಹಿಳೆ ಮೃತಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಂದಾವರ ನಿವಾಸಿ ಮಹಮ್ಮದ್ ಅವರ ಪತ್ನಿ ಝರೀನಾ(47) ಹಾಗೂ ಶಫಾ(20) ಮನೆಯಡಿಯಲ್ಲಿ ಸಿಲುಕಿ ಹಾಕಿಕೊಂಡವರು. ಝರಿನಾ ಅವರು ಮೃತಪಟ್ಟಿದ್ದು, ಸಫಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೆಲವು ಗಂಟೆಗಳ ಕಾಲ ರಕ್ಷಣಾ ಕಾರ್ಯದಲ್ಲಿ ಸ್ಥಳೀಯರು ತೊಡಗಿದ್ದರು. ಬಂಟ್ವಾಳ ಅಗ್ನಿಶಾಮಕ ಅಧಿಕಾರಿಗಳು, ಪೆÇಲೀಸರು, ತಾಲೂಕು ಆಡಳಿತದ ಸಿಬಂದಿ, ತಹಶೀಲ್ದಾರ್ ಎಸ್.ಬಿ.ಕೂಡಲಗಿ ಸ್ಥಳಕ್ಕೆ ಧಾವಿಸಿದ್ದಾರೆ.