Monday, November 25, 2024
ಕೃಷಿಮೂಡಬಿದಿರೆಸುದ್ದಿ

ಪುತ್ತಿಗೆ ಗುತ್ತು ಕಡಂದಲೆ ಪರಾರಿ : ಸಾಂಪ್ರದಾಯಿಕ ನಾಟಿ ಕಾರ್ಯಕ್ರಮಕ್ಕೆ ಚಾಲನೆ – ಕಹಳೆ ನ್ಯೂಸ್

ಕಡಂದಲೆ: ಪುತ್ತಿಗೆ ಗುತ್ತು ಕಡಂದಲೆ ಪರಾರಿ ಶ್ರೀ ಧೂಮಾವತಿ ದೈವದ ಜೋಡು ಪೂಕರೆ ಎಳೆಯುವ ಕಂಬಳದ ಗದ್ದೆಯ ಸಾಂಪ್ರದಾಯಿಕ ಏಣೀಲು ಸಾಗುವಳಿ ಕಾರ್ಯಕ್ರಮವು ನಾಟಿ ಮಾಡುವ ಮೂಲಕ ಜು. ೪ರಂದು ಸಂಪ್ರದಾಯದoತೆ ಪೂಜೆ ಪುರಸ್ಕಾರದಿಂದಿಗೆ ನೆರವೇರಿಸಲಾಯಿತು.

ಪುತ್ತಿಗೆ ಗುತ್ತು ಕಡಂದಲೆ ಪರಾರಿ ಕೆ.ಪಿ. ಸಂತೋಷ್ ಕುಮಾರ್ ಶೆಟ್ಟಿಯವರು ಈ ಗದ್ದೆಯಲ್ಲಿ ವರ್ಷಂಪ್ರತಿ ಎರಡು ಬೇಸಾಯ ಮಾಡುತ್ತಾ ಪರಂಪರೆಯ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಪುತ್ತಿಗೆ ಗುತ್ತು ಕಡಂದಲೆ ಪರಾರಿ ಕುಟುಂಬದ ಯಜಮಾನರಾದ ಕೆ.ಪಿ. ಸುಬ್ಬಯ್ಯ ಶೆಟ್ಟಿಯವರು ಶ್ರೀ ಧೂಮಾವತಿ ದೈವದ ಪ್ರಾರ್ಥನೆ ಮಾಡುವ ಮೂಲಕ ನಾಟಿ ಕಾರ್ಯಕ್ಕೆ ಚಾಲನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಶ್ರೀ ದೈವದ ಮುಕ್ಕಾಲ್ದಿ ಶಿವರಾಮ ಶೆಟ್ಟಿ, ಚಂದ್ರಶೇಖರ ದೇವಾಡಿಗ, ಹರೀಶ್ ಎ. ಅಮೀನ್ ಮತ್ತು ಕೆಲಸಗಾರರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು