Recent Posts

Sunday, January 19, 2025
ಮೂಡಬಿದಿರೆಸುದ್ದಿ

ಬೆಳುವಾಯಿ ಕರಿಯನಂಗಡಿ ನಿವಾಸಿ ಗೋಪಾಲ್ ನಾಯ್ಕ್ ನಾಪತ್ತೆ – ಕಹಳೆ ನ್ಯೂಸ್

ಮೂಡುಬಿದಿರೆ: ಬೆಳುವಾಯಿ ಕರಿಯನಂಗಡಿ ನಿವಾಸಿ ಗೋಪಾಲ್ ನಾಯ್ಕ್ (30ವ) ಜು 2 ರಂದು ಕ್ರಿಕೆಟ್ ಆಡಿ ತಾಯಿ ಮನೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ಮರಳಿ ಮನೆಗೆ ಬಂದಿಲ್ಲ ಎಂದು ಅವರ ಪತ್ನಿ ದೀಕ್ಷಿತಾ ಮೂಡುಬಿದಿರೆ ಪೋಲಿಸರಿಗೆ ದೂರು ನೀಡಿದ್ದಾರೆ.

ತಮ್ಮನ ಬೈಕ್ ನಲ್ಲಿ ತೆರಳಿ ಬೆಳುವಾಯಿಗೆ ಡ್ರಾಪ್ ಪಡೆದ ಅವರನ್ನು ನಂತರ ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಸಂಬಂಧಿಕರಲ್ಲಿ ಮತ್ತು ಗೆಳೆಯರಲ್ಲಿ ವಿಚಾರಿಸಿದ್ದರೂ ಸುಳಿವು ದೊರೆತ್ತಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗೋಪಾಲ್ ನಾಯ್ಕ್ 5.7 ಅಡಿ ಎತ್ತರ ಹೊಂದಿದ್ದು ಗೋಧಿ ಮೈಬಣ್ಣ ಸಾಧಾರಣ ಮೈಕಟ್ಟು ಹೊಂದಿದ್ದಾರೆ ಅವರ ಬಗ್ಗೆ ಮಾಹಿತಿ ತಿಳಿದವರು ಮೂಡುಬಿದಿರೆ ಪೋಲಿಸ್ ಠಾಣೆ ದೂರವಾಣಿ 08258-236333 ಹಾಗೂ ಪೋಲಿಸ್ ಆಯುಕ್ತರು 08242220801,2220800 ಸಂಪರ್ಕಿಸುವಂತೆ ಕೋರಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು