ಜಿಲ್ಲೆಗೊಂದು ಗೋಶಾಲೆ ಬಿಜೆಪಿಯ ಯೋಜನೆಯನ್ನು ಕೈಬಿಟ್ಟ ಕಾಂಗ್ರೆಸ್ : ಗೋವಿಗಾಗಿ ಮೇವು ಸಂಘಟನೆಯ ಸ್ಥಾಪಕ ಪ್ರಥ್ವೀರಾಜ್ ಶೆಟ್ಟಿ ಅಕ್ರೋಶ – ಕಹಳೆ ನ್ಯೂಸ್
ಬೆಂಗಳೂರು: 2023-24ನೇ ಸಾಲಿನ ರಾಜ್ಯ ಬಜೆಟ್ ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ತಂದಿದ್ದ ಕೆಲವು ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಕೈ ಹಿಡಿಯುತ್ತಾ ಎನ್ನುವ ಪ್ರಶ್ನೆ ರಾಜ್ಯದ ಜನತೆಗೆ ಇತ್ತು. ಈ ಪ್ರಶ್ನೆಗೆ ಇಂದಿನ ಬಜೆಟ್‍ನಲ್ಲಿ ಉತ್ತರ ಸಿಕ್ಕಿದೆ.
ನಿರೀಕ್ಷೆಯಂತೆಯೇ ಸಿದ್ಧರಾಮಯ್ಯ ಸರ್ಕಾರ, ಬಿಜೆಪಿ ಸರ್ಕಾರದಲ್ಲಿ ಘೋಷಣೆಯಾಗಿದ್ದ ಹಲವು ಕಾರ್ಯಕ್ರಮಗಳನ್ನು ಹೊಸ ಬಜೆಟ್‍ನಲ್ಲಿ ಪ್ರಸ್ತಾಪ ಮಾಡಲಾಗಿಲ್ಲ. ಈ ನಡುವೆ ಬಿಜೆಪಿ ಸರ್ಕಾರ ಘೋಷಣೆ ಮಾಡಿದ ಜಿಲ್ಲೆಗೊಂದು ಗೋಶಾಲೆ ಯೋಜನೆಯನ್ನು ಬಜೆಟ್‍ನಲ್ಲಿ ಕೈಬಿಡಲಾಗಿದೆ.
“ಗೋವುಗಳ ರಕ್ಷಣೆಗಾಗಿ ಬಿಜೆಪಿ ಸರ್ಕಾರ ಕಳೆದ ಬಾರಿ ಜಿಲ್ಲೆಗೊಂದು ಗೋಶಾಲೆ ಆರಂಭ ಮಾಡುವ ಯೋಜನೆ ರೂಪಿಸಿತ್ತು. ಆದರೆ, 2023-24ನೇ ಸಾಲಿನ ಬಜೆಟ್ ನಲ್ಲಿ, ಈ ಯೋಜನೆಯನ್ನು ಕೈಬಿಟ್ಟ ಕಾಂಗ್ರೆಸ್ ಸರ್ಕಾರದ ಕ್ರಮ ಖಂಡನೀಯ” ಎಂದು ಗೋವಿಗಾಗಿ ಮೇವು ಸಂಘಟನೆಯ ಸ್ಥಾಪಕರಾದ ಪೃಥ್ವೀರಾಜ್ ಶೆಟ್ಟಿ ಬಿಲ್ಲಾಡಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.