Recent Posts

Monday, January 20, 2025
ಸುದ್ದಿ

ಕಥೆ ಕೂಟದ 7 ನೇ ವರ್ಷದ ವಾರ್ಷಿಕೋತ್ಸವದ ಹಿನ್ನಲೆ; ಜು.09 ರಂದು ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭ –ಕಹಳೆ ನ್ಯೂಸ್

ಕಥೆ ಕೂಟ ಇದರ 7 ನೇ ವಾರ್ಷಿಕೋತ್ಸವದ ಪ್ರಯುಕ್ತ ಬೆಂಗಳೂರಿನಲ್ಲಿ ಇದೇ ಬರುವ ಜು. 09ರಂದು ಪುಸ್ತಕ ಬಿಡುಗಡೆಗೊಳ್ಳಲಿದೆ.

ಕಥೆ ಕೂಟವು 7ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದು, ಈ ಹಿನ್ನಲೆ ಬೆಂಗಳೂರಿನ ಬಸವನಗುಡಿಯ ಬಿಪಿ ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ 4 ಪುಸ್ತಕಗಳನ್ನು ಬಿಡುಗಡೆಗೊಳಿಸಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಗದೀಶ ಶರ್ಮರ ‘ದಶಕಂಠ ರಾವಣ’, ಜೋಗಿರವರ ‘ಅಶ್ವತ್ಥಾಮನ್’ ಮತ್ತು ‘ಚಿಯರ್ಸ್’ ಕಥೆ ಕೂಟದ ಮೂವತ್ತು ಕತೆಗಾರರ ‘ಒಲವು ತುಂಬುವುದಿಲ್ಲ’ ಕೃತಿಗಳು ಲೋಕಾರ್ಪಣೆಯಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೂ ಈ ಸಮಾರಂಭದಲ್ಲಿ ನಟರಾದ ಡಾಲಿ ಧನಂಜಯ, ರಾಜ್ ಬಿ ಶೆಟ್ಟಿ, ಕೃತಿಗಾರರಾದ ಜಗದೀಶ ಶರ್ಮಾ ಸಂಪ, ಗೋಪಾಲಕೃಷ್ಣ ಕುಂಟಿನಿ, ಜೋಗಿ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.