Monday, January 20, 2025
ಸುದ್ದಿ

ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ ಗಂಡ –ಕಹಳೆ ನ್ಯೂಸ್

ಬಿಹಾರದ ನಾವಡ ಜಿಲ್ಲೆಯಲ್ಲಿ ಗಂಡನೇ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆ ವಿವಾಹ ಮಾಡಿಸಿಕೊಟ್ಟ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಲ ತಿಂಗಳ ಹಿಂದೆ ಮಹಿಳೆ ಮದುವೆಯಾಗಿದ್ದು, ಮನಸ್ಸಿನಲ್ಲಿ ಮಾತ್ರ ಆಕೆಗೆ ತನ್ನ ಪ್ರಿಯಕರನ ಯೋಚನೆ ಕಾಡ್ತಾ ಇತ್ತು. ಅದೇ ಕಾರಣಕ್ಕೆ ಗಂಡನಿಲ್ಲದ ವೇಳೆ ಆಕೆ ಕದ್ದು ಮುಚ್ಚಿ ರಾತ್ರಿ ಪ್ರಿಯಕರನನ್ನು ಭೇಟಿ ಆಗುತ್ತಿದ್ದಳು. ಪ್ರಿಯಕರನ ಗ್ರಾಮಕ್ಕೆ ಬರುತ್ತಿದ್ದು, ಈ ವೇಳೆ ಯಾರಿಗೂ ಸಂಶಯ ಬರದಂತೆ ಇಬ್ಬರು ಭೇಟಿ ಆಗ್ತಾ ಇದ್ರು. ಪ್ರತಿಬಾರಿಯಂತೆ ಈ ಬಾರಿಯೂ ಗಂಡನಿಲ್ಲದ ವೇಳೆ ರಾತ್ರಿ ಪ್ರಿಯಕರನನ್ನು ಭೇಟಿ ಆಗಲು ಹೋಗುವಾಗ ಗಂಡನ ಮನೆಯವರು ರೆಡ್ ಹ್ಯಾಂಡ್ ಆಗಿ ಇಬ್ಬರನ್ನು ಹಿಡಿದಿದ್ದಾರೆ.

ಈ ವೇಳೆ ಪ್ರಿಯಕರನ ಮೇಲೆ ಹಿಗ್ಗಾಮುಗ್ಗವಾಗಿ ಥಳಿಸಿ, ಇಬ್ಬರನ್ನು ಸೆರೆ ಹಿಡಿದು ಊರು ಬಿಟ್ಟು ಹೋಗಲು ಹೇಳಿದ್ದಾರೆ.
ಆದರೆ ಮರುದಿನ ಬೆಳಗ್ಗೆ ಪತ್ನಿಯ ಪ್ರೇಮದ ಬಗ್ಗೆ ತಿಳಿದಿದ್ದ ಗಂಡ ಇಬ್ಬರನ್ನು ಕರೆದುಕೊಂಡು ಹೋಗಿ, ಪತ್ನಿಯನ್ನು ಪ್ರಿಯಕರನ ಜೊತೆ ಊರಿನ ದೇವಸ್ಥಾನದಲ್ಲಿ ವಿವಾಹ ಮಾಡಿಸಿದ್ದಾನೆ. ಪ್ರಿಯಕರನ ಹಣೆಗೆ ಸಿಂಧೂರವನ್ನು ಇಡುವ ವೇಳೆ ಮಹಿಳೆ ಅತ್ತಿದ್ದಾಳೆ. ಇನ್ನೂ ಗಂಡನೇ ಮುಂದೆ ನಿಂತು ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆ ಮದುವೆ ಮಾಡಿಸಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.