Tuesday, January 21, 2025
ದಕ್ಷಿಣ ಕನ್ನಡಸಂತಾಪಸುದ್ದಿ

ಕೊಣಾಜೆ: ಪ್ರೇಮ ವೈಫಲ್ಯ : ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಯುವತಿ – ಕಹಳೆ ನ್ಯೂಸ್

ಕೊಣಾಜೆ: ಪಜೀರುವಿನಲ್ಲಿ ಬಾಡಿಗೆ ಮನೆಯಲ್ಲಿ ತಾಯಿ, ಸಹೋದರನೊಂದಿಗೆ ವಾಸವಿದ್ದ ಯುವತಿಯೋರ್ವಳು ನೇಣಿಗೆ ಶರಣಾಗಿದ್ದಾರೆ.

ಪ್ರೀತಿಕಾ ಪೂಜಾರಿ (21) ಆತ್ಮಹತ್ಯೆ ಮಾಡಿಕೊಂಡ ಯುವತಿ. ಪ್ರೀತಿಕಾ ಪಜೀರು ಅಡಪ್ಪ ರೆಸಿಡೆನ್ಸಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮಂಗಳೂರಿನ ಕಾಲ್ ಸೆಂಟರೊಂದರಲ್ಲಿ ಪ್ರೀತಿಕಾ ಉದ್ಯೋಗದಲ್ಲಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗುರುವಾರ ಮಧ್ಯಾಹ್ನ 12.30ರ ವೇಳೆಗೆ ಪ್ರೀತಿಕಾ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧ್ಯಾಹ್ನ ಕಚೇರಿಯಿಂದ ಬಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಕಾರಣ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕೊಣಾಜೆ ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು