Monday, January 20, 2025
ಸುದ್ದಿ

ದಲಿತ ಸಮುದಾಯದ ಇಬ್ಬರು ಯುವಕರಿಗೆ ಮಲ ತಿನ್ನಿಸಿದ ರಕ್ಕಸರು..! : ಮಧ್ಯಪ್ರದೇಶದಲ್ಲಿ ಅಮಾನವೀಯ ಕೃತ್ಯ –ಕಹಳೆ ನ್ಯೂಸ್

ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ವರ್ಖಾಡಿ ಗ್ರಾಮದಲ್ಲಿ ಅಮಾನವೀಯ ಕೃತ್ಯವೊಂದು ಬೆಳಕಿಗೆ ಬಂದಿದ್ದು, ದಲಿತ ಸಮುದಾಯದ ಯುವಕರಿಗೆ ಮಲ ತಿನ್ನಿಸಿದ ಘಟನೆಯೊಂದು ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆ ಸಂಬಂಧ ಒಂದೇ ಕುಟುಂಬದ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ. 23 ಮತ್ತು 24ವರ್ಷದ ಯುವಕರಿಬ್ಬರು ಆರೋಪಿಯ ಕುಟುಂಬಕ್ಕೆ ಸೇರಿದ್ದ ಯುವತಿಯ ಜೊತೆ ಫೋನ್ ಕಾಲ್‌ನಲ್ಲಿ ಮಾತನಾಡುತ್ತಿದ್ದರು.

26ವರ್ಷದ ಯುವತಿ ಜೊತೆ ಮಾತನಾಡುತ್ತಿದ್ದ ಇಬ್ಬರು ದಲಿತ ಯುವಕರ ವಿಚಾರ ತಿಳಿದ ಆಕೆಯ ಕುಟುಂಬಸ್ಥರು ಮನೆಗೆ ಕರೆಸಿಕೊಂಡಿದ್ದಾರೆ.
ಬಳಿಕ ಅವರಿಗೆ ಮನಬಂದಂತೆ ಥಳಿಸಿ, ಚಪ್ಪಳಿ ಹಾರ ಹಾಕಿ ಮೆರವಣಿಗೆ ಮಾಡಿದ್ದಾರೆ. ಅದಲ್ಲದೇ ಒಂದೇ ಕುಟುಂಬದ 7 ಮಂದಿ ರಕ್ಕಸರು ಇಬ್ಬರು ದಲಿತ ಯುವಕರಿಗೆ ಬಲವಂತವಾಗಿ ಮಲ ತಿನ್ನಿಸಿದ್ದಾರೆ. ಈ ದೃಶ್ಯ ವೈರಲ್ ಆಗಿದ್ದು, ರಾಕ್ಷಸತ್ವತ ಕೃತ್ಯಕ್ಕೆ ಎಲ್ಲಡೆ ವ್ಯಾಪಕ ಅಕ್ರೋಶ ವ್ಯಕ್ತವಾಗಿದೆ.