Tuesday, January 21, 2025
ಸುದ್ದಿ

ಅಂಬಿಕಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಸಿ.ಎ ಇಂಟರ್‌ಮೀಡಿಯೇಟ್ ಪರೀಕ್ಷೆ ತೇರ್ಗಡೆ ದ್ವಿತೀಯ ಬಿ.ಕಾಂನ ಸ್ವರ್ಣಾ ಶೆಣೈ ಗ್ರೂಪ್ – 2 ಹಾಗೂ ತೇಜಸ್ವಿನಿ ಗ್ರೂಪ್ – 1 ಉತ್ತೀರ್ಣ – ಕಹಳೆ ನ್ಯೂಸ್

ಪುತ್ತೂರು : ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಇಬ್ಬರು ವಿದ್ಯಾರ್ಥಿನಿಯರು ದಿ ಇನ್‌ಸ್ಟಿಟ್ಯೂಟ್ ಆಫ್ ಚಾಟರ‍್ಡ್ ಅಕೌಂಟೆoಟ್ ಸಂಸ್ಥೆ ಮೇ ತಿಂಗಳಲ್ಲಿ ನಡೆಸಿದ ಸಿ.ಎ ಇಂಟರ್‌ಮೀಡಿಯೇಟ್ ಪರೀಕ್ಷೆಯ ಗ್ರೂಪ್ – 1 ಹಾಗೂ ಗ್ರೂಪ್ – 2 ವಿಭಾಗದಲ್ಲಿ ತೇರ್ಗಡೆ ಹೊಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನ ವೈ.ಜೀವನ್ ಶೆಣೈ ಹಾಗೂ ವೈ.ಜಯಶ್ರೀ ಶೆಣೈ ಪುತ್ರಿ ಸ್ವರ್ಣಾ ಶೆಣೈ ಗ್ರೂಪ್ – 2 ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ, ಬಂಟ್ವಾಳದ ವಾಮದಪದವು ನಿವಾಸಿಗಳಾದ ನಾರಾಯಣ ಮೂಲ್ಯ ಹಾಗೂ ಹೇಮಾವತಿ ದಂಪತಿ ಪುತ್ರಿ ತೇಜಸ್ವಿನಿ ಗ್ರೂಪ್ – 1 ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಅAಬಿಕಾ ಮಹಾವಿದ್ಯಾಲಯದಲ್ಲಿ ಬಿ.ಕಾಂ ವಿದ್ಯಾರ್ಥಿಗಳಿಗೆ ಪದವಿಯೊಂದಿಗೆ ಸಿ.ಎ ಅಥವ ಬ್ಯಾಂಕಿAಗ್ ಪರೀಕ್ಷೆಗಳಿಗೆ ಸಂಬAಧಿಸಿದ ಐಬಿಪಿಎಸ್ ಪರೀಕ್ಷಾ ತರಬೇತಿ ಪಡೆಯುವ ಅವಕಾಶ ಲಭ್ಯವಿದ್ದು, ಅನೇಕ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಕಳೆದ ಬಾರಿಯ ಸಿ.ಎ ಫೌಂಡೇಶನ್ ಪರೀಕ್ಷೆಗಳಲ್ಲಿ ಸಂಸ್ಥೆಯ ಮೂವರು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಅಂಬಿಕಾ ಮಹಾವಿದ್ಯಾಲಯ ಸ್ಪರ್ಧಾತ್ಮಕ ಪರೀಕ್ಷೆಗಳ ಕೇಂದ್ರವಾಗಿ ಗುರುತಿಸಿಕೊಳ್ಳುತ್ತಿದ್ದು, ಬಿ.ಎ ಅಧ್ಯಯನ ನಡೆಸುವ ವಿದ್ಯಾರ್ಥಿಗಳಿಗೂ ಸರ್ಕಾರಿ ಉದ್ಯೋಗಗಳಾದ ಎಫ್.ಡಿಎ, ಎಸ್.ಡಿ.ಎ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ. ಸಾಮಾನ್ಯವಾಗಿ ಬಿ.ಎ ಓದಿದವರಿಗೆ ಮುಂದೇನು ಎಂಬ ಗೊಂದಲಗಳಿರುವ ಸಂದರ್ಭದಲ್ಲಿ ಅಂಬಿಕಾ ಮಹಾವಿದ್ಯಾಲಯ ಸರ್ಕಾರಿ ಉದ್ಯೋಗದೆಡೆಗೆ ಬಿ.ಎ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿರುವುದು ವಿದ್ಯಾಥಿಗಳಿಗೆ ಹೊಸ ಭರವಸೆಯಾಗಿ ಕಾಣಿಸಿಕೊಂಡಿದೆ.

ಆನ್‌ಲೈನ್ ತರಬೇತಿ : ಸಿ.ಎ, ಐಬಿಪಿಎಸ್ ಹಾಗೂ ಸರ್ಕಾರಿ ಉದ್ಯೋಗಗಳ ಬಗೆಗಿನ ತರಬೇತಿಯನ್ನು ಆನ್ ಲೈನ್ ಮುಖಾಂತರವೂ ಪಡೆಯಬಹುದಾದ ಅವಕಾಶಗಳನ್ನು ಅಂಬಿಕಾ ಸಂಸ್ಥೆ ಪ್ರಸ್ತುತ ವರ್ಷದಿಂದ ಒದಗಿಸಿಕೊಡುತ್ತಿದೆ. ಬೇರೆ ಸಂಸ್ಥೆಗಳಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳು, ಉದ್ಯೋಗಿಗಳೂ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.

ಟಾರ್ಗೆಟ್ ನೀಟ್ 2024 : ಪ್ರಸ್ತುತ ವರ್ಷದಿಂದ ಅಂಬಿಕಾ ಅಕಾಡೆಮಿ ಫಾರ್ ಕಾಂಪೆಟಿಟಿವ್ ಎಗ್ಸಾಮಿನೇಶನ್ಸ್ ಎನ್ನುವ ತರಬೇತಿ ಕೇಂದ್ರವನ್ನು ನಟ್ಟೋಜ ಫೌಂಡೇಶನ್ ಟ್ರಸ್ಟ್ ಆರಂಭಿಸಿದ್ದು, ಅದರ ಮೂಲಕ ನೀಟ್ ರಿಪೀರ‍್ಸ್ ವಿದ್ಯಾರ್ಥಿಗಳಿಗಾಗಿ ಟಾರ್ಗೆಟ್ ನೀಟ್ 2024 ತರಗತಿಗಳನ್ನು ಅಂಬಿಕಾ ಮಹಾವಿದ್ಯಾಲಯದಲ್ಲಿ ಆರಂಭಿಸಲಾಗಿದೆ. ಒಂದು ವರ್ಷದ ಅವಧಿಯ ಟಾರ್ಗೆಟ್ ನೀಟ್ 2024 ತರಗತಿಗಳು ನುರಿತ ಉಪನ್ಯಾಸಕರನ್ನೊಳಗೊಂಡಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೆಡೆಗೂ ಪರಿಪೂರ್ಣ ಗಮನ ಹರಿಸುವ ಬದ್ಧತೆಯನ್ನು ಸಂಸ್ಥೆ ಒಡಮೂಡಿಸಿಕೊಂಡಿದೆ. ಪ್ರತೀ ವಾರ ನೀಟ್ ಮಾದರಿ ಪರೀಕ್ಷೆಗಳನ್ನು ನಡೆಸಿ ವಿದ್ಯಾರ್ಥಿಗಳನ್ನು ಅಂತಿಮ ಪರೀಕ್ಷೆಗೆ ಸಿದ್ಧಪಡಿಸಲಾಗುತ್ತದೆ. ನೀಟ್ ಪರೀಕ್ಷೆಯ ಸಿಲೆಬಸ್‌ಗೆ ಸಂಬAಧಿಸಿದAತೆ ಪ್ರತಿಯೊಂದು ವಿಷಯಗಳಿಗೂ ನೋಟ್ಸ್ ಒದಗಿಸುವುದಲ್ಲದೆ ವಿದ್ಯಾರ್ಥಿಗಳಿಗೆ ಸಮಗ್ರ ಹಾಗೂ ಸಂಪೂರ್ಣ ಮಾರ್ಗದರ್ಶನ ನೀಡಲಾಗುತ್ತದೆ. ಹುಡುಗರಿಗೆ ಹಾಗೂ ಹುಡುಗಿಯರಿಗೆ ಅತ್ಯುತ್ತಮ ಹಾಸ್ಟೆಲ್ ವ್ಯವಸ್ಥೆಯನ್ನು ಒದಗಿಸಿಕೊಡಲಾಗುತ್ತದೆ ಹಾಗೂ ಉಪನ್ಯಾಸಕ ಸಹಿತವಾದ ಅಧ್ಯಯನ ಅವಧಿಯನ್ನು ಕಲ್ಪಿಸಿಕೊಡಲಾಗುತ್ತದೆ. ಇದರಿಂದ ಅಧ್ಯಯನ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಿಷಯಾವಾರು ಸಂದೇಹಗಳನ್ನು ಪರಿಹರಿಸಲು ಸಾಧ್ಯವಾಗಲಿದೆ.
ಹೆಚ್ಚಿನ ಮಾಹಿತಿಗೆ : 9449102082