Tuesday, January 21, 2025
ಸುದ್ದಿ

ಎರಡು ಸರಕಾರಿ ಬಸ್ಸುಗಳ ನಡುವೆ ಚಾರ್ಮಾಡಿ ಘಾಟಿಯಲ್ಲಿ ಅಪಘಾತ; ಚಾಲಕರಿಗೆ ಗಾಯ – ಕಹಳೆ ನ್ಯೂಸ್

ಎರಡು ಸರಕಾರಿ ಬಸ್ಸುಗಳ ನಡುವೆ ಅಪಘಾತ ಸಂಭವಿಸಿದ ಘಟನೆ ನಿನ್ನೆ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಅಪಘಾತದಿಂದ ಎರಡು ಬಸ್ಸಿನ ಚಾಲಕರಿಗೆ ಕಾಲಿಗೆ ಗಂಭೀರ ಗಾಯವಾಗಿದ್ದು ಗಾಯಗೊಂಡ ಬಸ್ಸಿನ ಚಾಲಕರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎರಡೂ ಬಸ್ಸಿನಲ್ಲಿ ಸುಮಾರು 80 ಮಂದಿ ಪ್ರಯಾಣಿಕರಿದ್ದು, ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಈ ರಸ್ತೆ ಅಪಘಾತದಿಂದ ಚಾರ್ಮಾಡಿ ಘಾಟಿಯಲ್ಲಿ ಕಿ.ಮೀ.ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ.