ಮಂಗಳೂರು: ಗೌರಿ ಹತ್ಯೆಯ ಆರೋಪಿಗಳು ಎಂದು ಬಿಂಬಿಸಲ್ಪಟ್ಟ ಪರಶುರಾಮ್ ವಾಗ್ಮೊರೆ ಹಾಗೂ ಮನೋಹರ ಯಡವಿಯವರು ಎಸ್.ಐ.ಟಿ ಯ ವಿರುದ್ಧ ಮಾಧ್ಯಮದ ಮುಂದೆ ಹೇಳಿದಂತಹ ಸ್ಪೋಟಕ ಹೇಳಿಕೆಯ ಅನುಸಾರ ಶ್ರೀ ರಾಮಸೇನೆಯ ರಾಜ್ಯ ಸಮಿತಿಯಿಂದ ಬೆಂಗಳೂರಿನಲ್ಲಿ ಇಂದು ಮಾನ್ಯ ರಾಜಪಾಲರಿಗೂ ಹಾಗೂ ಮಾನ್ಯ ಗೃಹ ಮಂತ್ರಿಗಳಿಗೆ ಸೂಕ್ತ ತನಿಖೆ ಆಗಬೇಕು, ಯಾವುದೇ ಕಾರಣಕ್ಕೂ ನಿರಪರಾಧಿಗಳಿಗೆ ಶಿಕ್ಷೆ ಆಗಬಾರದು ಎಂದು ಆಗ್ರಹಿಸಿ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯದ ಕಾರ್ಯಾದ್ಯಕ್ಷರಾದ ಗಂಗಾಧರ್ ಕುಲಕರ್ಣಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್, ನಗರ ಅಧ್ಯಕ್ಷ ವಿನಯ್ ಗೌಡ, ಹಿಂದೂ ಜನ ಜಾಗೃತಿಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ, ಪ್ರಧಾನ ಕಾರ್ಯದರ್ಶಿ ಧನರಾಜ್ ಮತ್ತಿತರರು ಉಪಸ್ಥಿತರಿದ್ದರು.