Recent Posts

Tuesday, January 21, 2025
ಸುದ್ದಿ

ಕುಡಿದ ಅಮಲಿನಲ್ಲಿ ಪತ್ನಿಯ ಬರ್ಬರವಾಗಿ ಹತ್ಯೆ ಮಾಡಿದ ಸೈಕೋ ಗಂಡ..!! ಮುಂದೇನಾಯ್ತು ಗೊತ್ತಾ…?? – ಕಹಳೆ ನ್ಯೂಸ್

ಮೆಕ್ಸಿಕೋ : ಕುಡಿದ ಅಮಲಿನಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ಆಕೆಯ ಮೆದುಳನ್ನು ತಿಂದ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕೃತ್ಯವನ್ನು ಎಸಗಿದ ವ್ಯಕ್ತಿಯನ್ನು ಅಲ್ವಾರೊ ಎಂದು ಗುರುತಿಸಲಾಗಿದೆ. ತಾನು ಪೂಜಿಸುವ ದೆವ್ವವೇ ಈ ಕೊಲೆ ಮಾಡುವಂತೆ ಆದೇಶಿಸಿದೆ ಎಂದು ಆಲ್ವಾರೋ ಹೇಳಿದ್ದು, ಅದರಂತೆ ಜೂನ್ 29ರಂದು ಪತ್ನಿಯನ್ನು ಕೊಂದು ತುಂಡು ತುಂಡಾಗಿ ಕೆಲವು ಭಾಗಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಈ ಸೈಕೋ ಹಾಕಿದ್ದನು. ಕೆಲವು ಭಾಗಗಳನ್ನು ಪರ್ವತದ ಮೇಲೆ ಎಸೆದರೆ, ಇನ್ನು ಕೆಲವು ಭಾಗಗಳನ್ನು ಮನೆಯಲ್ಲಿ ಇರಿಸಿಕೊಂಡಿದ್ದ.

ಅಮಲು ಇಳಿದ ಬಳಿಕ ತಾನು ಎಸಗಿರುವ ಕೃತ್ಯವನ್ನು ಕಂಡ ಆಲ್ವಾರೋ, ಎರಡು ದಿನಗಳ ನಂತರ ಅವನು ತನ್ನ ಮಲಮಗನಿಗೆ ಕರೆ ಮಾಡಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದು, ಈ ಭೀಕರ ಹತ್ಯೆಯ ಸುದ್ದಿ ಮೆಕ್ಸಿಕೋದಲ್ಲಿ ತಲ್ಲಣ ಮೂಡಿಸಿದೆ.