Tuesday, January 21, 2025
ಕ್ರೈಮ್ಸುದ್ದಿ

ಮಂಗಳೂರು : ಕೆಲಸದಾಳುವಿಗೆ ಬೆಂಕಿ ಹಚ್ಚಿ ಕೊಲೆ ಮಾಡಿ ಸಾಕ್ಷಿ ನಾಶಕ್ಕೆ ಯತ್ನಿಸಿದ ಮಾಲಕ – ಕಹಳೆ ನ್ಯೂಸ್

ಮಂಗಳೂರು : ಹೊರ ವಲಯದ ಮುಳಿಹಿತ್ತುವಿನ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಯುವಕನೋರ್ವನನ್ನು ಅಂಗಡಿ ಮಾಲಕ ಹತ್ಯೆಗೈದ ಹಾಗೂ ಸಾಕ್ಷಿ ನಾಶಕ್ಕೆ ಯತ್ನಿಸಿದ ಘಟನೆ ಜು . 8 ರಂದು ನಡೆದಿದೆ.

ಮುಳಿಹಿತ್ತು ಜಂಕ್ಷನ್‍ನಲ್ಲಿರುವ ಮಶುಪ ಜನರಲ್ ಸ್ಟೋರ್ ನಲ್ಲಿ ಕೆಲಸಕ್ಕಿದ್ದ ಗಟ್ಯಾನ್ ಥಿ ಜಗ್ಗು (35) ನಿಗೂಢವಾಗಿ ಸಾವನ್ನಪ್ಪಿದ ಯುವಕ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ನಗರದ ಪಾಂಡೇಶ್ವರ ನಿವಾಸಿ ತೌಲಿನ್ ಹಸನ್ ಕೊಲೆಗಾರ. ಕೊಲೆಯಾದ ಜಗ್ಗು ,ತೌಲಿನ್ ಹಸನ್ ಬಳಿ ಕೆಲಸ ಮಾಡುತ್ತಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

ಜು 8 ರಂದು ಬೆಳಿಗ್ಗೆ 8.30ರ ಸುಮಾರಿಗೆ ಆರೋಪಿ ಹಸನ್ ಹಾಗೂ ಕೆಲಸದಾಳು ಗಟ್ಯಾನ್ ಥಿ ಜಗ್ಗು ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಈ ವೇಳೆ ಆರೋಪಿಯು ಜಗ್ಗುಗೆ ಬೆಂಕಿ ಕೊಟ್ಟು ಸುಟ್ಟು ಕೊಲೆ ಮಾಡಿದ್ದಾನೆ. ಬಳಿಕ ಅಸುಪಾಸಿನ ಸಾರ್ವಜನಿಕರಲ್ಲಿ ಆತನಿಗೆ ವಿದ್ಯುತ್ ಶಾಕ್ ಹೊಡೆದಿರುವುದಾಗಿ ನಂಬಿಸಲು ಪ್ರಯತ್ನಿಸಿದ್ದಾನೆ.

ಮಧ್ಯಾಹ್ನ 1.30ರ ಸುಮಾರಿಗೆ ಆರೋಪಿಯು ಜಗ್ಗುವನ್ನು ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.

ನಂತರದಲ್ಲಿ ಮಂಗಳೂರು ದಕ್ಷಿಣ ಪೆÇಲೀಸ್ ಪೆÇಲೀಸರು ತನಿಖೆ ಆರಂಭಿಸಿದ್ದು ಪರಿಸರದ ಸಾರ್ವಜನಿಕರನ್ನು ವಿಚಾರಿಸಿದ್ದಾರೆ. ಹಾಗೂ ಕೃತ್ಯ ನಡೆದ ಸ್ಥಳದಲ್ಲಿದ್ದ ಸಾಕ್ಷ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಇದೊಂದು ಕೊಲೆ ಪ್ರಕರಣವೆಂದು ದೃಢಪಟ್ಟಿದ್ದು ಆರೋಪಿ ತೌಸಿಫ್ ಹುಸೈನ್ ಎಂಬಾತನನ್ನು ಪೆÇಲೀಸರು ದಸ್ತಗಿರಿ ಮಾಡಿದ್ದಾರೆ.