Tuesday, January 21, 2025
ಸುದ್ದಿ

ಮಂಗಳೂರಿನ ಮೀನಕಳಿಯಲ್ಲಿ ಉಂಟಾದ ಭಾರೀ ಪ್ರಮಾಣದ ಕಡಲ್ಕೊರೆತ – ಕಹಳೆ ನ್ಯೂಸ್

ಬೈಕಂಪಾಡಿ: ಮೀನಕಳಿಯ ಭಾಗದಲ್ಲಿ ಭಾರೀ ಪ್ರಮಾಣದ ಕಡಲ್ಕೊರೆತ ಉಂಟಾಗಿದ್ದು, ಅಲೆಗಳ ಅಬ್ಬರಕ್ಕೆ ಸಾರ್ವಜನಿಕ ಆಟದ ಮೈದಾನದ ಭೂ ಭಾಗ ಸಮುದ್ರ ಪಾಲಾಗಿದೆ.

ಮಂಗಳೂರಿನ ಬೀಚ್‍ಗಳಲ್ಲಿ ಕಡಲ್ಕೊರೆತ ತಡೆಗೆ ತಾತ್ಕಾಲಿಕ ಕಾಮಗಾರಿ ಆರಂಭವಾಗಿದೆ. ಬೈಕಂಪಾಡಿ, ಮೀನಕಳಿಯ, ಪಣಂಬೂರು ಬೀಚ್‍ನಲ್ಲಿ ಅಲೆಗಳ ಅಬ್ಬರ ತಡೆಯಲು ಮರಳು ಚೀಲಗಳ ಅಳವಡಿಸಲಾಗುತ್ತಿದೆ. ಹಿಟಾಚಿ ಮೂಲಕ ದೊಡ್ಡ ಗಾತ್ರದ ಕಪ್ಪು ಬ್ಯಾಗ್‍ಗಳಿಗೆ ಮರಳು ತುಂಬಿಸಿ ಜೋಡಿಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು