Recent Posts

Monday, January 20, 2025
ಉಡುಪಿಸುದ್ದಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ಎಬಿವಿಪಿ 75ನೇ ರಾಷ್ಟ್ರೀಯ ವಿದ್ಯಾರ್ಥಿ ದಿವಸ್ –ಕಹಳೆ ನ್ಯೂಸ್

1949 ಜುಲೈ 9 ರಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರದಪುನರ್ ನಿರ್ಮಾಣದ ಧ್ಯೇಯದೊಂದಿಗೆ ಅಧಿಕೃತವಾಗಿ ನೊಂದಾಯಿಸಲ್ಪಟ್ಟು ಪ್ರಾರಂಭವಾಯಿತು. ಅಂದಿನಿಂದ ಇಂದಿನವರೆಗೂ ಪ್ರತೀ ವರ್ಷ ಎಬಿವಿಪಿ ಈ ದಿನವನ್ನು ರಾಷ್ಟ್ರೀಯ ವಿದ್ಯಾರ್ಥಿ ದಿವಸನ್ನಾಗಿ ಆಚರಿಸಿಕೊಂಡು ಬಂದಿದೆ. ಈ ಬಾರಿ ಎಬಿವಿಪಿ 75ನೇ ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಅನ್ನು ರಾಷ್ಟ್ರಾದ್ಯಂತ ಪ್ರತೀ ಶಾಖೆಗಳಲ್ಲಿ ಧ್ವಜಾರೋಹಣ ಮಾಡುವುದರೊಂದಿಗೆ ಕಾರ್ಯಕ್ರಮದ ಸಂಭ್ರಮಾಚರಣೆ ಆಚರಿಸಿತು.

ಅಂತೆಯೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ಕೇಶವ ನಿಲಯ ಸಂಘ ಕಾರ್ಯಾಲಯದ ಮಾಧವ ಸಭಾಂಗಣದಲ್ಲಿ ಇಂದು ಬೆಳಗ್ಗೆ ಧ್ವಜಾರೋಹಣ ನಡೆಸಿ ಸಭಾ ಕಾರ್ಯಕ್ರಮದೊಂದಿಗೆ ಸಂಪನ್ನಗೊಳಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಧ್ವಜಾರೋಹಣವನ್ನು ಜಿಲ್ಲಾ ಪ್ರಮುಖರಾದ ಶ್ರೀ ರಾಜಶಂಕರ ಇವರು ನೆರವೇರಿಸಿದರು. ನಂತರ ಸಭಾ ಕಾರ್ಯಕ್ರಮದಲ್ಲಿ ಮೊದಲಿಗೆ ನಗರ ಕಾರ್ಯಕಾರಣಿ ಸದಸ್ಯರಾದ ಮಂಗಳಗೌರಿ ಸ್ವಾಗತಿಸಿ ನಗರ ಕಾರ್ಯದರ್ಶಿ ಶ್ರೀವತ್ಸ ಇವರು ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದರು. ನಂತರ ವಿಶೇಷ ಭಾಷಣವನ್ನು ಪತ್ರಕರ್ತರಾದ ಶ್ರೀ ಶ್ರೀಕಾಂತ ಶೆಟ್ಟಿ ಕಾರ್ಕಳ ಇವರು ನಡೆಸಿ ದೇಶದ ಈ ಅಮೃತ ಕಾಲದಲ್ಲಿ ಎಬಿವಿಪಿಯ ಪಾತ್ರ ಮಹತ್ವದ್ದಾಗಿರುತ್ತದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಎಬಿವಿಪಿಯ ಹಿರಿಯ ಕಾರ್ಯಕರ್ತರಾದ ಶಿವಾನಂದ ನಾಯಕ್ ಅವರು ಉಪಸ್ಥಿತರಿದ್ದರು. ಕೊನೆಯಲ್ಲಿ ತಾಲೂಕು ಸಂಚಾಲಕರಾದ ಶ್ರೀ ಅಜಿತ್ ಜೋಗಿ ವಂದಿಸಿದರು. ನಗರ ಕಾರ್ಯಕಾರಣಿ ಸದಸ್ಯರಾದ ಮನು ಶೆಟ್ಟಿ ಮತ್ತು ರವಿಚಂದ್ರ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಕಾರ್ಯಕರ್ತರಿಗೆ ವಿವಿಧ ಸಸಿಗಳನ್ನು ಹಂಚಲಾಯಿತು.