Monday, November 25, 2024
ಸುದ್ದಿ

ಮೂಡುಬಿದಿರೆಯಲ್ಲಿ ತುಳುನಾಡಿನ ಅಂಬೇಡ್ಕರ್ ಪಿ.ಡೀಕಯ್ಯ ಪರಿನಿಬ್ಬಾಣ ದಿನಾಚರಣೆ – ಕಹಳೆ ನ್ಯೂಸ್

ಮೂಡುಬಿದಿರೆ: ಭಾರತದ ಅರ್ಥವ್ಯವಸ್ಥೆಯ ಕೃಷಿ, ಉದ್ಯಮ, ಮಾತ್ರವಲ್ಲ ಸೇವಾರಂಗದ ಪೈಕಿ ಖಾಸಗಿ ರಂಗವನ್ನೂ ಹೊರತುಪಡಿಸಿದರೆ ಸರಕಾರಿ ಸೇವಾರಂಗದ ಶೇ2ರಷ್ಟು ಪಾಲು ಮಾತ್ರ ದಲಿತರು ಇನ್ನಿತರ ಹಿಂದುಳಿದ ವರ್ಗಕ್ಕಿದೆ. ಅಲ್ಲಿ ಶೇ 50ರ ಆಸುಪಾಸು ಮೀಸಲಾತಿಯಿದ್ದರೂ ಖಾಸಗೀಕರಣ ಹಿಂದುಳಿದವರ ಸಾಂವಿಧಾನಿಕ ಹಕ್ಕುಗಳನ್ನೂ ನುಂಗುತ್ತಿದೆ. ಹಿಂದುಳಿದವರು ರಾಜಕಾರಣದಲ್ಲಿ ಯಾವುದೋ ಪಕ್ಷಕ್ಕೆ ಅಂಟಿಕೊoಡು ಸವಲತ್ತುಗಳಿಗಾಗಿ ಗೋಗರೆಯುವುದೇ ಆಗಿದೆ. ಹಾಗಾಗಿ ಹಿಂದುಳಿದವರು ಸುಶಿಕ್ಷಿತರಾಗಿ ಸಮಾನ ಅವಕಾಶಗಳನ್ನು ಪಡೆಯಲು ವ್ಯಸನಮುಕ್ತರಾಗಿ ಜ್ಞಾನವೇ ಶಕ್ತಿ ಎನ್ನುವುದನ್ನು ಅರಿತು ಸುಶಿಕ್ಷಿತರಾಗಬೇಕಿದೆ ಎಂದು ಬೆಂಗಳೂರಿನ ಅಕ್ಕಾ” ಐಎಎಸ್ ಅಕಾಡೆಮಿ ನಿದೇರ್ಶಕ ಡಾ.ಶಿವಕುಮಾರ್ ಎಚ್ಚರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತುಲುನಾಡ್ ಮನ್ಸ ಸಮಾಜ ಸೇವಾ ಸಂಘ ( ರಿ ) ಕೇಂದ್ರೀಯ ಸಮಿತಿ, ಮೂಡುಬಿದಿರೆ ಆಶ್ರಯದಲ್ಲಿ ರವಿವಾರ, ಸಮಾಜ ಮಂದಿರದಲ್ಲಿ ತುಲುನಾಡಿನ ದಲಿತ ಚಳುವಳಿ ನೇತಾರ, ಸಮಾಜ ಪರಿವರ್ತನಾ ನಾಯಕ, ಬೌದ್ಧ ಮಹಾ ಉಪಾಸಕ, ತುಲುನಾಡ್ ಮನ್ಸ ಸಮಾಜ ಸೇವಾ ಸಂಘ ದ ಸಂಸ್ಥಾಪಕ, ಆಟಕೂಟ ತುಲುನಾಡ್ ನಿದೇರ್ಶಕ, ತುಲುನಾಡಿನ ಅಂಬೇಡ್ಕರ್ ಖ್ಯಾತಿಯ ಪಿ.ಡೀಕಯ್ಯ ರವರ ಪರಿನಿಬ್ಬಾಣ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತುಲುನಾಡ್ ಮನ್ಸ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಎಂ. ಶಾಂತರಾಮ್ ಸಭಾಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವ ಸಲಹೆಗಾರ ಅಚ್ಚುತ ಸಂಪಿಗೆ ಅವರು ಪಿ.ಡೀಕಯ್ಯರವರ ಬದುಕು ಮತ್ತು ಹೋರಾಟವನ್ನು ವಿವರಿಸಿದರು.
ಮೂಲ್ಕಿ ಸರಕಾರಿ ಪ.ಪೂ. ಕಾಲೇಜು ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ ಮಾತನಾಡಿ ಪಿ.ಡೀಕಯ್ಯರವರ ಚಳವಳಿಯ ಬಾಂಧವ್ಯವನ್ನು ನೆನಪಿಸಿಕೊಂಡರು.

ಜಿಲ್ಲಾ ಮುಖಂಡರು ಹಾಗು ಹೊರ ಜಿಲ್ಲಾ ಮುಖಂಡರುಗಳ ಗೌರವ ಉಪಸ್ಥಿತಿಯಲ್ಲಿ ಎಸ್ ಎಸ್ ಎಸ್ ಎಲ್ ಸಿಯ 14 ಹಾಗು ಪಿಯುಸಿ ಯಲ್ಲಿ ಗರಿಷ್ಠ ಶೇ.85 ಕ್ಕಿಂತ ಮೇಲ್ಪಟ್ಟು ಅಂಕ ಪಡೆದ ಸ್ವಜಾತಿಯ 6 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.