ಅರ್ಹತ್ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ನಡೆದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಚಾಲನೆ ನೀಡಿದ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ – ಕಹಳೆ ನ್ಯೂಸ್
ಮೂಡುಬಿದಿರೆ: ಇಲ್ಲಿನ ಅರ್ಹತ್ ಸ್ಪೋಟ್ಸ್ 9 ಅಕಾಡೆಮಿಯ ವತಿಯಿಂದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಭಾನುವಾರ ನಡೆಯಿತು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಪಂದ್ಯಾಟಕ್ಕೆ ಚಾಲನೆಯನ್ನು ನೀಡಿ ಮಾತನಾಡಿ ಶಟಲ್ ಬ್ಯಾಡ್ಮಿಂಟನ್ ಆಟದಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. ಮೂಡುಬಿದಿರೆಯಲ್ಲಿ ಅರ್ಹತ್ ಸ್ಪೋರ್ಟ್ಸ್ ಅಕಾಡೆಮಿಯ ಮೂಲಕ ಒಳಾಂಗಣ ಕ್ರೀಡಾಂಗಣ ಆಗುವ ಮೂಲಕ ಕ್ರೀಡಾಪಟುಗಳಿಗೆ ಸಹಕಾರಿಯಾಗಿದೆ ಎಂದ ಅವರು ತಾನೂ ಶಟಲ್ ಬ್ಯಾಡ್ಮಿಂಟನ್ ಆಡುತ್ತಿರುವುದರಿಂದ ಸ್ಲಿಮ್ ಆಗಿರಲು ಸಾಧ್ಯವಾಗಿದೆ ಎಂದರು.
ಪುರಸಭಾ ನಿರ್ಗಮನ ಅಧ್ಯಕ್ಷ ಪ್ರಸಾದ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.
ಮೂಡುಬಿದಿರೆ ರೋಟರಿ ಕ್ಲಬ್ ನ ಅಧ್ಯಕ್ಷ ನಾಗರಾಜ್ ಬಿ.ಮಾತನಾಡಿ ತಾನು ಸಣ್ಣ ವಯಸ್ಸಿನಲ್ಲಿರುವಾಗ ಇಂತಹ ವ್ಯವಸ್ಥೆಗಳು ಇರಲಿಲ್ಲ. ಇದೀಗ ಮೂಡುಬಿದಿರೆ ಬೆಳೆದಿದೆ ಅದಕ್ಕೆ ಬೇಕಾದಂತಹ ವ್ಯವಸ್ಥೆಗಳು ಇದ್ದು ಕ್ರೀಡಾ ಚಟುವಟಿಕೆಗಳು ನಡೆದರೆ ಮಹತ್ವ ಸಿಗುತ್ತದೆ. ಕ್ರೀಡೆಯು ಸೋಲನ್ನು ಆತ್ಮವಿಶ್ವಾಸದೊಂದಿಗೆ ಸ್ವೀಕರಿಸಿ ಗೆಲ್ಲುವ ಬಗೆಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದ ಅವರು ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಅಂಕದ ಕಡೆಗೆ ಹೆಚ್ಚಿನ ಒಲವನ್ನು ತೋರಿಸುವುದು ಸರಿಯಲ್ಲ ಕ್ರೀಡೆಗೂ ಹೆಚ್ಚಿನ ಆದ್ಯತೆಯನ್ನು ನೀಡುವಂತೆ ಸಲಹೆ ನೀಡಿದರು.