Recent Posts

Sunday, January 19, 2025
ಉಡುಪಿಸಿನಿಮಾಸುದ್ದಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಕ್ರಾಂತ್ ರೋಣ ನಟಿ ನೀತಾ ಅಶೋಕ್ –ಕಹಳೆ ನ್ಯೂಸ್

ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಮೂಲಕ ಸದ್ದು ಮಾಡಿದ್ದ ನಟಿ ನೀತಾ ಅಶೋಕ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೇ ಜುಲೈ 10ರಂದು ಪ್ರೀತಿಸಿದ ಹುಡುಗನ ಜೊತೆ ಹಸೆಮಣೆ ಏರಿದ್ದು ಈ ಮೂಲಕ ತಮ್ಮ ಅಭಿಮಾನಿಗಳಿಗೆ ನೀತಾ ಗುಡ್ ನ್ಯೂಸ್ ನೀಡಿದ್ದಾರೆ. ಸದ್ಯ ನೀತಾ ಅಶೋಕ್ ಮದುವೆಯ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

‘ಯಶೋದ’ ಧಾರವಾಹಿ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ನಟಿ ನೀತಾ ಅಶೋಕ್ ನಾ ನಿನ್ನ ಬಿಡಲಾರೆ, ಸೇರಿದಂತೆ ಹಿಂದಿ ಸೀರಿಯಲ್‌ನಲ್ಲೂ ನಟಿಸಿದ್ದರು. ಬಳಿಕ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ನಿರೂಪ್ ಭಂಡಾರಿ ಜೋಡಿಯಾಗಿ ನೀತಾ ಮೋಡಿ ಮಾಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಪ್ರಿಯಕರ ಸತೀಶ್ ಮೆಸ್ತಾ ಅವರೊಂದಿಗೆ ಏಕಾಏಕಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನೀತಾ ಅಶೋಕ್ ಅವರು ಆಮೇಲೆ ಪ್ರೀತಿ ಬಗ್ಗೆ ಹೇಳಿಕೊಂಡಿದ್ದರು. ಕಾಲೇಜಿನಿಂದಲೇ ಇವರಿಬ್ಬರು ಸ್ನೇಹಿತರಾಗಿದ್ದು, ಆಮೇಲೆ ಪ್ರೀತಿ ಹುಟ್ಟಿ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಮೂಲತಃ ಉಡುಪಿಯವರಾದ ನೀತಾ ಅಶೋಕ್, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸತೀಶ್ ಅವರನ್ನು ವರಿಸಿದ್ದಾರೆ. ಉಡುಪಿಯಲ್ಲಿ ಸರಳವಾಗಿ ಕುಟುಂಬಸ್ಥರು, ಆತ್ಮೀಯರ ಸಾಕ್ಷಿಯಾಗಿ ಮದುವೆ ಆಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು