ಶ್ವಾನಪ್ರಿಯರಿಗಾಗಿ ಮಾಡಿದ ಸಿನಿಮಾ ಸೋತಿದ್ದೇ ವಿರಳ. ವಿಶ್ವದ ಯಾವುದೇ ಮೂಲೆಗೆ ಹೋದರೂ ಶ್ವಾನಗಳ ಸಿನಿಮಾ ಬಾಕ್ಸಾಫೀಸ್‍ನಲ್ಲಿ ಗೆದ್ದಿರೋ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಕಳೆದ ಕನ್ನಡದಲ್ಲಿ ತೆರೆಕಂಡ ‘777 ಚಾರ್ಲಿ’ ಕೂಡ ಸೂಪರ್ ಹಿಟ್ ಆಗಿತ್ತು.
ಪ್ಯಾನ್ ಇಂಡಿಯಾ ಆಡಿಯನ್ಸ್‍ಗಾಗೇ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದರು. ಈಗ ಮಲಯಾಳಂನಲ್ಲಿ ಕೇವಲ ಶ್ವಾನಗಳನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಅದುವೇ ‘ವಾಲಟ್ಟಿ’. ಇದು ಶ್ವಾನಗಳ ಕುರಿತಾದ ವಿಭಿನ್ನ ಭಾವನಾತ್ಮಕ ಸಿನಿಮಾ. ಈಗಾಗಲೇ ಸಿನಿಮಾ ಒಂದೇ ಒಂದು ಪೋಸ್ಟರ್ ಮೂಲಕ ಗಮನ ಸೆಳೆದಿದೆ.
ಇದೇ ಜೋಷ್‌ನಲ್ಲಿ ‘ವಾಲಟ್ಟಿ’ ತಂಡ ಟ್ರೈಲರ್ ಅನ್ನು ರಿಲೀಸ್ ಮಾಡಿದೆ. ಇಂದು (ಜುಲೈ 10) ‘ವಾಲಟ್ಟಿ’ ಟ್ರೈಲರ್ ರಿಲೀಸ್ ಆಗಿದ್ದು, ಸಾಕು ನಾಯಿಗಳ ಬಗ್ಗೆ ತಯಾರಾಗಿರುವ ಅದ್ಭುತ ಸಿನಿಮಾ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕೇವಲ ಟ್ರೈಲರ್ ನೋಡಿನೇ ಪ್ರೇಕ್ಷಕರಿಗೆ ಈ ಪ್ರತಿಕ್ರಿಯೆ ನೀಡಿದ್ದು, ಶ್ವಾನಗಳ ಮೇಲಿನ ಸಿನಿಮಾಗಿರುವ ಕ್ರೇಜ್ ಎಷ್ಟು ಅಂತ ತೋರುತ್ತಿದೆ.
‘ವಾಲಟ್ಟಿ’ ಸಿನಿಮಾದಲ್ಲಿ ಸುಮಾರು 9 ನಾಯಿಗಳಿವೆ. ಇವುಗಳಿಗೆ ಸತತವಾಗಿ ಎರಡು ವರ್ಷಗಳ ಕಾಲ ನಟನೆಯಲ್ಲಿ ತರಬೇತಿಯನ್ನು ನೀಡಲಾಗಿದೆ. ಈ ಸಿನಿಮಾಗಳೇ ನಾಯಿಗಳೇ ಪ್ರಮುಖ ಪಾತ್ರಧಾರಿಗಳು. ಇವು ನಟಿಸಿದ್ದಾವೆ. ಆಕ್ಷನ್ ಮಾಡಿವೆ. ಕಣ್ಣೀರು ಕೂಡ ತರಿಸಿವೆ.
ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಜುಲೈ 14 ರಂದು ಮಲಯಾಳಂನಲ್ಲಿ ಬಿಡುಗಡೆಯಾಗುತ್ತಿದ್ದರೆ, ಇತ್ತ ಜುಲೈ 21ರಂದು ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.
ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು, ಮೇಕಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ‘ವಾಲಟ್ಟಿ’ ಕನ್ನಡದ ಅವತರಣಿಯ ಡಬ್ಬಿಂಗ್ ಜವಾಬ್ದಾರಿಯನ್ನು ‘ರತ್ನನ್ ಪ್ರಪಂಚ’ ಸಿನಿಮಾ ಖ್ಯಾತಿಯ ರೋಹಿತ್ ಪಡಕ್ಕಿ ವಹಿಸಿಕೊಂಡಿದ್ದಾರೆ.
ಈಗಾಗಲೇ ಟ್ರೈಲರ್ ಬಿಡುಗಡೆಯಾಗಿದ್ದು ಮೇಕಿಂಗ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು ಪ್ರೇಕ್ಷಕರು ಡೈಲಾಗ್ಸ್ ಗೆ ಫಿದಾ ಆಗಿದ್ದಾರೆ. ವಾಲಟ್ಟಿ ಕನ್ನಡ ಡೈಲಾಗ್ ಡಬ್ಬಿಂಗ್ ಜವಾಬ್ದಾರಿಯನ್ನು ರತ್ನನ್ ಪ್ರಪಂಚ ಸಿನೆಮಾದ ನಿರ್ದೇಶಕ ರೋಹಿತ್ ಪಡಕ್ಕಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
‘ಅಂಗಾಮಲಿ ಡೈರೀಸ್’ ಹಾಗೂ ‘ಹೋಮ್ ‘ ಅಂತಹ ವಿಭಿನ್ನ ಸಿನೆಮಾಗಳನ್ನು ನಿರ್ಮಿಸಿ, ಹೊಸ ರೀತಿಯ ಸಿನಿಮಾಗಳಿಗೆ ಬುನಾದಿ ಹಾಡಿದ್ದ ವಿಜಯ್ ಬಾಬುರವರು ವಾಲಟ್ಟಿ – ಎ ಟೇಲ್ ಆಫ್ ಟೇಲ್ಸ್ ಸಿನಿಮಾವನ್ನು ಮಲಯಾಳಂನಲ್ಲಿ ಪ್ರಸ್ತುತ ಪಡಿಸುತ್ತಿದ್ದಾರೆ. ದೇವನ್ ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಕನ್ನಡ ಕೆಆರ್‍ಜಿ ಸ್ಟುಡಿಯೋಸ್ ವಿಶ್ವದಾದ್ಯಂತ ಈ ಸಿನಿಮಾವನ್ನು ಬಿಡುಗಡೆ ಮಾಡುತ್ತಿದೆ.