ಉಚಿತ ಮದ್ಯ ನೀಡುವಂತೆ ಸರಕಾರಕ್ಕೆ ಆಗ್ರಹಿಸಿ ಉಡುಪಿಯ ಚಿತ್ತರಂಜನ್ ಸರ್ಕಲ್ನಲ್ಲಿ ವಿನೂತನ ರೀತಿಯಲ್ಲಿ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯ ಸರಕಾರ ಇತ್ತೀಚಿನ ಬಜೆಟ್ನಲ್ಲಿ ಮದ್ಯದ ಬೆಲೆಯನ್ನು ಶೇಕಡಾ 20ರಷ್ಟು ಏರಿಕೆ ಮಾಡಿದ್ದು, ಈ ಹಿನ್ನಲೆ ಉಡುಪಿ ಜಿಲ್ಲಾ ನಾಗರಿಕ ಸಮಿತಿ, ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಪ್ರತಿಭಟನೆಯಲ್ಲಿ ಕಾರ್ಮಿಕರು, ಸರಕಾರದ ಉಚಿತ ಯೋಜನೆಗೆ ಹಣ ನಮ್ಮಿಂದಲೇ ಬರುವುದು ಹಾಗಾಗಿ ಮದ್ಯದ ಬೆಲೆಯನ್ನು ಇಳಿಕೆ ಮಾಡಿ. ಇಲ್ಲದಿದ್ದರೆ ಬೆಳಿಗ್ಗೆ ಮತ್ತು ಸಂಜೆ ನೈಂಟಿಯನ್ನು ಉಚಿತವಾಗಿ ನೀಡಿ. ಇದು ಯಾವುದು ಆಗದಿದ್ದಲ್ಲಿ ಸಾರಾಯಿಯನ್ನು ಬಂದ್ ಮಾಡಿ, ಆ ಹಣವನ್ನು ನಾವು ನಮ್ಮ ಹೆಂಡತಿ, ಮಕ್ಕಳಿಗೆ ನಿಡುತ್ತೇವೆ ಎಂದಿದ್ದಾರೆ.