ನೇಪಾಳದಲ್ಲಿ ಮತ್ತೊಂದು ಹೆಲಿಕಾಪ್ಟರ್ ದುರಂತ ಸಂಭವಿಸಿದೆ. 6 ಜನರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ನೇಪಾಳದ ಮೌಂಟ್ ಎವರೆಸ್ಟ್ ಸಮೀಪದ ಲಂಜುರ ಬಳಿ ಪತನವಾಗಿದೆ.
ಮೂಲಗಳ ಪ್ರಕಾರ ಕೇವಲ 12 ನಿಮಿಷ ಹಾರಾಟ ನಡೆಸಿದ ನಂತರ ಹೆಲಿಕಾಪ್ಟರ್ ನಿಯಂತ್ರಣ ಕೇಂದ್ರದಿoದ ಸಂಪರ್ಕ ಕಳೆದುಕೊಂಡಿದ್ದು .ಈ ಖಾಸಗಿ ವಾಣಿಜ್ಯ ಉದ್ದೇಶದ ಹೆಲಿಕಾಪ್ಟರ್ 5 ಪ್ರವಾಸಿಗರಿಗೆ ಮೌಂಟ್ ಎವರೆಸ್ಟ್ ಪರ್ವತವನ್ನು ತೋರಿಸಿ ವಾಪಸ್ ಕಠ್ಮಂಡುವಿಗೆ ಕರೆದೊಯ್ಯುವಾಗ ಅಪಘಾತ ಸಂಭವಿಸಿದೆ.
ರಕ್ಷಣಾ ಕಾರ್ಯಾಚರಣೆಯ ಮ್ಯಾನೇಜರ್ ರಾಜು ನ್ಯೂಪಾನೆ ಮಾತನಾಡಿ, ಭದ್ರತಾ ಅಧಿಕಾರಿಗಳೊಂದಿಗೆ ಆಲ್ಟಿಟ್ಯೂಡ್ ಹೆಲಿಕಾಪ್ಟರ್ ಘಟನಾ ಸ್ಥಳಕ್ಕೆ ತಲುಪಿದೆ ಎಂದಿದ್ದಾರೆ. ಈ ಹೆಲಿಕಾಪ್ಟರ್ ಗೆ ಕ್ಯಾಪ್ಟನ್ ಚೆಟ್ ಗುರುಂಗ್ ಪೈಲಟ್ ಆಗಿದ್ದರು.