Recent Posts

Monday, January 20, 2025
ಸುದ್ದಿ

ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಥಾನಕ್ಕೆ ಬಂದಿದೆ ಕುತ್ತು – ಕಹಳೆ ನ್ಯೂಸ್

ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿ ತಣ್ಣಗಾಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಜಾರಕೀಹೊಳಿ ಸಹೋದರರ ಫೈಟ್ ಇನ್ನೂ ಕೂಡ ಬೂದಿ ಮುಚ್ಚಿದ ಕೆಂಡದಂತಿದ್ದು ಲಕ್ಷ್ಮಿಗೆ ಈಗ ಮತ್ತೊಂದು ಸಂಕಟ ಎದುರಾದಂತಿದೆ ಎಂದು ಹೇಳುತ್ತೆ ಈ ರಿಪೋರ್ಟ್.

ಸಮ್ಮಿಶ್ರ ಸರಕಾರ ಇನ್ನೇನು ಬಿದ್ದು ಹೋಯಿತು ಎನ್ನುವಷ್ಟರ ಮಟ್ಟಿಗೆ ತಾರಕಕ್ಕೇರಿದ್ದ ಕಾಂಗ್ರೆಸ್ ರಾಜಕೀಯವನ್ನು, ಸದ್ಯದ ಮಟ್ಟಿಗೆ ತಣ್ಣಗಾಗಿಸುವವಲ್ಲಿ ಯಶಸ್ವಿಯಾಗಿದ್ದದ್ದು ಮುಖ್ಯಮಂತ್ರಿ ಕುಮಾರಸ್ವಾಮಿಯೇ ಹೊರತು, ಕಾಂಗ್ರೆಸ್ ಮುಖಂಡರಲ್ಲ ಎನ್ನುವುದು ಗಮನಿಸಬೇಕಾದ ಅಂಶ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರನ್ನು ಎದುರು ಹಾಕಿಕೊಂಡ ನಂತರ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಟೈಮೇ ಸರಿ ಇದ್ದಂತಿಲ್ಲ. ಹೇಗೋ ಲಕ್ಷ್ಮಿ ಹೆಬ್ಬಾಳ್ಕರ್ ಹಳ್ಳಕ್ಕೆ ಬಿದ್ದಿದ್ದಾರೆ ಎಂದು ಆಳಿಗೊಂದು ಕಲ್ಲು ಎಸೆಯುತ್ತಿರುವಂತಿದೆ. ಇದೀಗ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಕೂಗು ಕೇಳುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಪಿಸಿಸಿ ಮಹಿಳಾ ಘಟಕದ ಕೆಲ ಪದಾಧಿಕಾರಿಗಳು ನಿನ್ನೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು, ಕೂಡಲೇ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಮನವಿ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡ್ತಾ ಇದೆ. ಒಬ್ಬರಿಗೆ ಒಂದು ಹುದ್ದೆ ಎಂಬ ನಿಯಮ ಇದೆ. ಹಾಗಾಗಿ ಶಾಸಕರಾಗಿರುವ ಲಕ್ಷ್ಮಿಗೆ ಮಹಿಳಾ ಘಟಕದ ಅಧ್ಯಕ್ಷ ಸ್ಥಾನ ನೀಡುವುದು ತರವಲ್ಲ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಕೆಲವರು ಒತ್ತಾಯಿಸಿದ್ದಾರಂತೆ.

ಲಕ್ಷ್ಮಿ ಹೆಬ್ಬಾಳ್ಕರ್ ಸ್ಥಾನದಕ್ಕೆ ಮಹಿಳಾ ಘಟಕದ ಪ್ರಮುಖ ಪದಾಧಿಕಾರಿಗಳಲ್ಲಿ ಒಬ್ಬರಾಗಿರುವ ನಾಗಲಕ್ಷ್ಮಿ ಚೌಧರಿ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ. ಸ್ವತಃ ದಂತ ವೈದ್ಯೆ ಆಗಿರುವ ನಾಗಲಕ್ಷ್ಮಿ ಚೌಧರಿ ಅವರು ಹಲವು ವರ್ಷಗಳಿಂದ ಕಾಂಗ್ರೆಸ್ ಮಹಿಳಾ ಘಟಕದಲ್ಲಿದ್ದಾರೆ.

ಬದಲಾದ ರಾಜಕೀಯ ಪರಿಸ್ಥಿತಿಗಳೇ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಬದಲಾಯಿಸುವಂತೆ ಮಾಡಿರುವ ಮನವಿಗೆ ಕಾರಣ ಎನ್ನಲಾಗಿದೆ. ಈ ಒತ್ತಾಯದ ಹಿಂದೆ ಲಕ್ಷ್ಮಿ ಹೆಬ್ಬಾಳ್ಕರ್ & ಡಿ.ಕೆ.ಶಿವಕುಮಾರ್ ವಿರೋಧಿ ಬಣದ್ದೂ ಕೈವಾಡ ಇದೆಯೆಂದು ಶಂಕಿಸಲು ಕಾರಣಗಳಿವೆ. ಅದೇನೆಂದ್ರೆ ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸಚಿವ ಸ್ಥಾನ ನೀಡಲಾಗಿರಲಿಲ್ಲ. ಆದರೆ ಅವರಿಗೆ ಶಕ್ತಿಶಾಲಿಯಾದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನೀಡಲಾಗುವುದು ಎಂಬ ಭರವಸೆ ನಾಯಕರಿಂದ ಸಿಕ್ಕಿದೆಯಂತೆ. ಹಾಗಾಗಿ ನಿಗಮ ಮಂಡಳಿ ಸ್ಥಾನ ನೀಡಿದ ಮೇಲೆ ಅವರನ್ನು ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆ ಇದೆ.