Monday, January 20, 2025
ಸುದ್ದಿ

ಕೊನೆಗೂ ಅಮರನಾಥ ದೇವರ ದರ್ಶನ ಪಡೆದ ನರಿಕೊಂಬು ನಿವಾಸಿ ಸಂತೋಷ್ ನೇತ್ರತ್ವದ ತಂಡ – ಕಹಳೆ ನ್ಯೂಸ್

ಬಂಟ್ವಾಳ : ದ.ಕ.ಮತ್ತು ಉಡುಪಿ ಜಿಲ್ಲೆಯಿಂದ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಮಾರುತಿ ನಗರ ನಿವಾಸಿ ಸಂತೋಷ್ ನೇತ್ರತ್ವದಲ್ಲಿ ಅಮರನಾಥ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳು ಸೇಫ್ ಆಗಿ ಅಮರನಾಥ ದೇವರ ದರ್ಶನ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದ.ಕ.ಮತ್ತು ಉಡುಪಿ ಜಿಲ್ಲೆಯ ಒಟ್ಟು 20 ಮಂದಿ ಯಾತ್ರಾರ್ಥಿಗಳು ಅಮರನಾಥ ಯಾತ್ರೆ ಕೈಗೊಂಡಿದ್ದರು.ಆದರೆ ಜಮ್ಮುಕಾಶ್ಮೀರದಲ್ಲಿ ಅತಿಯಾದ ಮಳೆಯ ಕಾರಣ ಅಮರನಾಥ ದೇವಲಯಕ್ಕೆ ಸಾಗುವ ದಾರಿ ಮಧ್ಯೆ ಅಲ್ಲಲ್ಲಿ ಭೂಕುಸಿತದಿಂದ ಸಂಪರ್ಕ ಕಡಿತಗೊಂಡಿತ್ತು. ಯಾತ್ರಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮಿಲಿಟರಿ ಪಡೆಯವರು ಯಾರನ್ನು ಕೂಡ ದರ್ಶನ ಮಾಡಲು ಬಿಡದೆ,ಅವರ ಕ್ಯಾಂಪ್ ನೊಳಗೆ ಉಳಿದುಕೊಳ್ಳಲು ಸೂಕ್ತವಾದ ವ್ಯವಸ್ಥೆ ಕಲ್ಪಿಸಿದ್ದರು.

ದ.ಕ.ಮತ್ತು ಉಡುಪಿ ಜಿಲ್ಲೆಯಿಂದ ಹೋಗಿರುವ ಯಾತ್ರಾರ್ಥಿಗಳು ಜುಲೈ 8 ರಂದು ಶನಿವಾರ ಮಿಲಿಟರಿ ಕ್ಯಾಂಪ್ ನಲ್ಲಿ ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ನೀಡಿದ್ದರು.

ಅದಾದ ಬಳಿಕ ಪಂಜತರಣಿ ಎಂಬಲ್ಲಿದ ಇಂದು ಬೆಳಿಗ್ಗೆ ಅಮರನಾಥ ಯಾತ್ರೆದರ್ಶನ ಪಡೆಯಲು ಹೋಗಲಾಯಿತು ಎಂದು ಸಂತೋಷ್ ತಿಳಿಸಿದ್ದಾರೆ. ಅಮರನಾಥ ದೇವರ ದರ್ಶನ ಪಡೆದು ಇದೀಗ
ವೈಷ್ಣೋದೇವಿ ಯಾತ್ರೆ ಕೈಗೊಂಡಿದ್ದಾರೆ. ಜಮ್ಮುಕಾಶ್ಮೀರದಲ್ಲಿ ಚಳಿ ಅಧಿಕವಾಗಿದ್ದು ನಿನ್ನೆಯ ದಿನ 6 ಡಿಗ್ರಿ ಸೆಲ್ಸಿಯಸ್ ಚಳಿ ಇತ್ತು ಎಂದು ಯಾತ್ರಾರ್ಥಿಗಳು ತಿಳಿಸಿದ್ದಾರೆ.