ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಾಂತ ಪ್ರಚಾರಕ್ ಬೈಠಕ್ 2023ರ ಜುಲೈ 13 ರಿಂದ 15ರ ವರೆಗೆ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಉದಕಮಂಡಲ (ಊಟಿ)ಯಲ್ಲಿ ನಡೆಯಲಿದೆ. ಈ ಬೈಠಕ್ ನಲ್ಲಿ ಪ್ರಮುಖವಾಗಿ ಸಂಘಟನಾತ್ಮಕ ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ಜೊತೆಗೆ ಎಲ್ಲಾ ಸಹ ಸರಕಾರ್ಯವಾಹರುಗಳಾದ ಡಾ.ಕೃಷ್ಣ ಗೋಪಾಲ್, ಡಾ.ಮನಮೋಹನ್ ವೈದ್ಯ, ಸಿ.ಆರ್.ಮುಕುಂದ್, ಅರುಣ್ ಕುಮಾರ್, ರಾಮದತ್ತ್ ಬೈಠಕ್ ನಲ್ಲಿ ಭಾಗವಹಿಸಲಿದ್ದಾರೆ. ಬೈಠಕ್ ನಲ್ಲಿ ಎಲ್ಲಾ ಪ್ರಾಂತ ಪ್ರಚಾರಕರು ಮತ್ತು ಸಹ ಪ್ರಾಂತಪ್ರಚಾರಕರು, ಕ್ಷೇತ್ರೀಯ ಪ್ರಚಾರಕರು ಮತ್ತು ಸಹ ಕ್ಷೇತ್ರೀಯ ಪ್ರಚಾರಕರು, ಎಲ್ಲಾ ಕಾರ್ಯ ವಿಭಾಗಗಳ ಅಖಿಲ ಭಾರತೀಯ ಅಧಿಕಾರಿಗಳು ಹಾಗೂ ಸಂಘ ಪ್ರೇರಿತ ವಿವಿಧ ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಮಂತ್ರಿಗಳು ಉಪಸ್ಥಿತರಿರಲಿದ್ದಾರೆ.
ಸಭೆಯಲ್ಲಿ ಮುಖ್ಯವಾಗಿ ಈ ವರ್ಷ ನಡೆದ ಸಂಘ ಶಿಕ್ಷಾ ವರ್ಗಗಳ ಸುದ್ದಿ ಮತ್ತು ಸಮೀಕ್ಷೆ, ಸಂಘದ ಶತಾಬ್ದಿ ಕಾರ್ಯವಿಸ್ತಾರ ಯೋಜನೆಗಳ ಪ್ರಗತಿ, ಶಾಖಾ ಸ್ಥರದಲ್ಲಿ ಸಮಾಜಿಕ ಕಾರ್ಯಗಳ ವಿವರಣೆ ಮತ್ತು ಪರಿವರ್ತನೆಯ ಅನುಭವಗಳ ವಿನಿಮಯ ನಡೆಯಲಿವೆ. ಸಭೆಯಲ್ಲಿ ಮುಂದಿನ ನಾಲ್ಕೈದು ತಿಂಗಳ ಕಾರ್ಯಕ್ರಮಗಳ ಯೋಜನೆ ಮತ್ತು ಪ್ರಸ್ತುತ ಪರಿಸ್ಥಿತಿಯ ಬಗ್ಗೆಯೂ ಚರ್ಚೆ ನಡೆಯಲಿದೆ.