Saturday, November 23, 2024
ಸುದ್ದಿ

ಬಿಸಿಸಿಐಗೂ ಮಾಹಿತಿ ಹಕ್ಕು ಕಾಯ್ದೆ ಅನ್ವಯ – ಕಹಳೆ ನ್ಯೂಸ್

ದೆಹಲಿ: ಎಲ್ಲಾ ಕ್ಷೇತ್ರಗಳಿಗೂ ಮಾಹಿತಿ ಹಕ್ಕು ಕಾಯ್ದೆ ಅನ್ವಯವಾಗುತ್ತಾ ಇದೆ. ಈ ಆರ್‌ಟಿಐ ಕಾಯ್ದೆಯಡಿಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಇನ್ಮುಂದೆ ಬೋರ್ಡ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಉತ್ತರಿಸಬೇಕಿದೆ.

ಮಾಹಿತಿ ಹಕ್ಕು ಕಾಯ್ದೆ ಅನ್ವಯ ಯಾವನೇ ಒಬ್ಬ ಮಾಹಿತಿಯನ್ನು ಕೇಳಿದ್ರೂ ಸರಿಯಾದ ಮಾಹಿತಿಯನ್ನೆ ಕೊಡಬೇಕು. ಈ ಆ್ಯಕ್ಟ್ಗೆ ಈಗ ಬಿಸಿಸಿಐ ಕೂಡ ಒಳಪಟ್ಟಿದೆ. ನಿನ್ನೆಯಿಂದ ಭಾರತೀಯ ಕ್ರಿಕೆಟ್ ಮಂಡಳಿಯನ್ನೂ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ತರಲಾಯಿತು. ಹೀಗಾಗಿ ದೇಶಿಗರು ಕ್ರಿಕೆಟ್ ಮಂಡಳಿಗೆ ಸಂಬಂಧಿಸಿ ಮಾಹಿತಿ ಕೇಳಿದರೆ ಇನ್ಮುಂದೆ ಬಿಸಿಸಿಐ ಮಾಹಿತಿ ಒದಗಿಸಬೇಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದೇಶದಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿ ದೊಡ್ಡ ಮಟ್ಟದಲ್ಲಿ ಏಕಸ್ವಾಮ್ಯ ಹಕ್ಕು ಹೊಂದಿರುವ ಬಿಸಿಸಿಐ ಕೂಡ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಬರಲಿದೆ. ಇದಕ್ಕೆ ಅನುಮೋದನೆ ನೀಡಲಾಗಿದೆ ಎಂದು ಸುಪ್ರೀಮ್ ಕೋರ್ಟ್ ಪುನರುಚ್ಛರಿಸಿದೆ’ ಎಂದು ಕೇಂದ್ರೀಯ ಮಾಹಿತಿ ಆಯುಕ್ತರಾದ ಶ್ರೀಧರ್ ಆಚಾರ್ಯುಲು ತಿಳಿಸಿದ್ದಾರೆ.