Thursday, January 23, 2025
ಸುದ್ದಿ

ಟೊಮ್ಯಾಟೊ ಕಾವಲುಗಾರನಿಗೆ ಚಾಕುವಿನಿಂದ ಇರಿದು ಹಲ್ಲೆ! – ಕಹಳೆ ನ್ಯೂಸ್

ರಾಯಚೂರು : ಟೊಮ್ಯಾಟೊ ಕಾವಲಿಗಾಗಿ ನಿಂತಿದ್ದ ರಫಿ ಎಂಬವರು ಮೇಲೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ರಾಯಚೂರಿನ ಮಾನ್ವಿ ಪಟ್ಟಣದ ಮಾರ್ಕೆಟ್‌ನಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಮಯದಲ್ಲಿ ದುಷ್ಕರ್ಮಿಯೊಬ್ಬ ರಫಿ ಜೊತೆ ಮಾತನಾಡುವ ಸಲುವಾಗಿ ತಡರಾತ್ರಿ ವೇಳೆ ಬಂದು ರಫಿಯವರ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾನೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಾಯಾಳು ಸಮೀಪದ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಟೊಮ್ಯಾಟೊ ಕಳ್ಳತನಕ್ಕಾಗಿ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಟೊಮ್ಯಾಟೊಗೆ ಚಿನ್ನದ ಬೆಲೆ ಬಂದಿರುವುದರಿAದ ಕಳ್ಳರ ಹಾವಳಿ ಹೆಚ್ಚಾಗಿದೆ. ಈ ಹಿನ್ನೆಲೆ ರೈತರು ರಾತ್ರಿಯಿಡೀ ಟೊಮ್ಯಾಟೊ ಬೆಲೆಯನ್ನು ಕಾಯುವಂತಾಗಿದೆ.