Thursday, January 23, 2025
ಸುದ್ದಿ

ರಾಹುಲ್ ಗಾಂಧಿ ಸಂಸತ್ ಸ್ಥಾನದ ಅನರ್ಹತೆ ಖಂಡಿಸಿ; ಪಾಣೆಮಂಗಳೂರು ಕಾಂಗ್ರೆಸ್ ಬ್ಲಾಕ್‌ನಿಂದ ಮೌನ ಪ್ರತಿಭಟನೆ : ಕಹಳೆ ನ್ಯೂಸ್

ಬಂಟ್ವಾಳ : ವಿಧಾನಸಭಾ ಕ್ಷೇತ್ರ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರ ನೇತೃತ್ವದಲ್ಲಿ ಕೇಂದ್ರದ ನಾಯಕ ರಾಹುಲ್ ಗಾಂಧಿ ಅವರಿಗೆ ನೀಡಿರುವ ಶಿಕ್ಷೆ ಹಾಗೂ ಲೋಕಸಭಾ ಸದಸ್ಯತ್ವ ಸ್ಥಾನದ ಅನರ್ಹತೆಯನ್ನು ಖಂಡಿಸಿ ಬಿ. ಸಿ ರೋಡ್ ಮಿನಿ ವಿಧಾನಸೌಧ ಮುಂಭಾಗದಲ್ಲಿ ಮೌನ ಪ್ರತಿಭಟನೆ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿಭಟನೆಯಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಶೆಟ್ಟಿ, ಪ್ರಮುಖರಾದ ಅಶ್ವನಿ ಕುಮಾರ್ ರೈ, ಸುದರ್ಶನ ಜೈನ್, ಪದ್ಮಶೇಖರ್ ಜೈನ್, ಲುಕ್ಮಾನ್,ಸುಭಾಶ್ಚಂದ್ರ ಕೊಳ್ನಾಡು, ಮಲ್ಲಿಕಾ ವಿಶೆಟ್ಟಿ, ಸದಾಶಿವ ಬಂಗೇರ, ಐಡಾ ಸುರೇಶ್, ಮಹಮ್ಮದ್ ಶರೀಫ್, ವೆಂಕಪ್ಪ ಪೂಜಾರಿ, ಜೆಸಿಂತ ಡಿ.ಸೋಜ, ಬಿ.ಮೋಹನ್, ಪರಮೇಶ್ವರ ಮೂಲ್ಯ, ಲೋಲಾಕ್ಷ ಶೆಟ್ಟಿ, ಮಹಮ್ಮದ್ ನಂದವಾರ, ಹರ್ಷಾದ್, ಜೊಸ್ಪಿನ್ ಸುರೇಶ್ ಜೋರಾ, ದಿನೇಶ್ ಶೆಟ್ಟಿ, ಪ್ರಶಾಂತ್ ಕುಲಾಲ್, ಸದಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.