Friday, January 24, 2025
ಪುತ್ತೂರುಸುದ್ದಿ

ಜು.15 ರಂದು ಪುತ್ತೂರಿನ ಜಿ.ಎಲ್.ಒನ್ ಮಾಲ್‌ನಲ್ಲಿ ‘ಫನ್ ಗ್ಯಾಲಕ್ಸಿ’ ಲೋಕಾರ್ಪಣೆ –ಕಹಳೆ ನ್ಯೂಸ್

ಪುತ್ತೂರಿನ ಜಿ.ಎಲ್.ಒನ್ ಮಾಲ್‌ನಲ್ಲಿ ಮುದ್ದು ಪುಟಾಣಿಗಳಿಗೆ, ತರ್ಲೆ ಮಾಡುವ ಯುವಕರಿಗಾಗಿ ‘ಫನ್ ಗ್ಯಾಲಕ್ಸಿ’ ಹೆಸರಿನಲ್ಲಿ ನೂತನವಾಗಿ ಗೇಮಿಂಗ್ ಝೋನ್ ಇದೇ ಬರುವ ಜು.15 ರಂದು ಅದ್ದೂರಿಯಾಗಿ ಲೋಕಾರ್ಪಣೆಯಾಗಲಿದೆ.

ಮಾಲ್‌ಗಳಲ್ಲಿ ಕೇವಲ ಬಟ್ಟೆಗಳ ಮಲಿಗೆಗಳು, ಸಿನಿಮಾ ಥಿಯೇಟರ್‌ಗಳು ಇದ್ದರೇ ಸಾಲದು, ಮುದ್ದು ಪುಟಾಣಿ ಮಕ್ಕಳ ಜೊತೆಗೆ ತಾವು ಆಟವಾಡಲು ಗೇಮ್ಸ್  ಗಳು ಇದ್ದರೆ ಎಷ್ಟು ಚೆನ್ನಾಗಿರುತ್ತೆ  ಅಂತ ಅಂದುಕೊಳ್ಳುವವರು ಸುಮಾರು ಜನ ಇದ್ದಾರೆ. ಅದರಲ್ಲೂ ಪುತ್ತೂರಿನಲ್ಲಿ ಇತ್ತಿಚೇಗೆ ಹೊಸದಾದ ಜಿ.ಎಲ್.ಒನ್ ಮಾಲ್ ಒಪನ್ ಆಗಿದ್ದು, ಈ ಮಾಲ್‌ನಲ್ಲಿ ಗೇಮ್ಸ್  ಗಳು ಇರಬೇಕಿತ್ತು ಅನ್ನೋರಿಗೆ ತುಂಬಾ ಸಂತಸದ ವಿಷಯವೊಂದಿದೆ

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು, ನಿಮ್ಮ ಮುದ್ದು ಮಕ್ಕಳಿಗಾಗಿ ‘ಫನ್ ಗ್ಯಾಲಕ್ಸಿ’ ಓಪನ್ ಆಗ್ತಾ ಇದ್ದು, ಇದೇ ಬರುವ ಜು.15 ರಂದು ಪುತ್ತೂರಿನ ಜಿ.ಎಲ್. ಒನ್ ಮಾಲ್‌ನಲ್ಲಿ ‘ಫನ್ ಗ್ಯಾಲಕ್ಸಿ’ ಯನ್ನು, ಜಿ.ಎಲ್.ಆಚಾರ್ಯ ಜುವೆಲ್ಲರ್ಸ್ ಮಾಲಕರಾದ ಬಲರಾಮ ಆಚಾರ್ಯ ಅವರು ಉದ್ಘಾಟಿಸಲಿದ್ದಾರೆ. ಇನ್ನೂ ಈ ‘ಫನ್ ಗ್ಯಾಲಕ್ಸಿ’ ಪುತ್ತೂರಿನಲ್ಲಿ ಓಪನ್ ಆಗ್ತಾ ಇರುವ ಮೊದಲ ಗೆಮಿಂಗ್ ಝೋನ್ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ .

ಜಾಹೀರಾತು
ಜಾಹೀರಾತು
ಜಾಹೀರಾತು