Friday, January 24, 2025
ಸುದ್ದಿ

ಮಾಣಿ ವಿದ್ಯಾನಗರ ಪಾಳ್ಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ – ಕಹಳೆ ನ್ಯೂಸ್

ವಿಟ್ಲ: ಬಂಟ್ವಾಳ ತಾಲೂಕಿನ ಮಾಣಿ ಪೆರಾಜೆ ಗ್ರಾಮದ ವಿದ್ಯಾನಗರ ಪಾಳ್ಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಜು. 12ರಂದು ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಹ್ಲಾದ್ ಜೆ. ಶೆಟ್ಟಿರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳಲ್ಲಿಸೂಕ್ತವಾಗಿರುವ ಪ್ರತಿಭೆಯನ್ನು ಹೊರ ತರುವಲ್ಲಿ ಸಂಪನ್ಮೂಲ ವ್ಯಕ್ತಿಗಳು ನೀಡುವ ತರಬೇತಿ ಅತ್ಯಗತ್ಯವಾಗಿದೆ. ವಿದ್ಯಾ ರ್ಥಿಗಳು ಇಂತಹಸಹಪಠ್ಯ ಚಟುವಟಿಕೆಗಳ ತರಬೇತಿಯಲ್ಲಿ ಮನ:ಪೂರ್ವಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ಅವರ ಕೌಶಲ್ಯಗಳುವೃದ್ಧಿಗೊಳ್ಳುತ್ತದೆ. ಅವರ ಚೇತೋಹಾರಿ ಜೀವನಕ್ಕೆ ಇಂತಹ ಸಹಪಠ್ಯ ಚಟುವಟಿಕೆಗಳು ದಾರಿದೀ ಪವಾಗುತ್ತದೆ ಎಂದರು.

ಚೆಸ್ ತರಬೇತುದಾರರಾದ ಡೆನ್ಸಿಲ್ ಕುಟಿನ್ನರವರು ಮಾತನಾಡಿ ಮಕ್ಕಳು ಬೌದ್ಧಿಕವಾಗಿ ಬೆಳವಣಿಗೆ ಹೊಂದಲು ಹಾಗೂ ಸೃಜನಶೀಲತೆಯನ್ನು ಮೈಗೂಡಿಕೊಳ್ಳಲು ಚೆಸ್ ನಂತಹ ಸಹಪಠ್ಯ ಚಟುವಟಿಕೆಗಳು ಗಮನಾರ್ಹಪಾತ್ರ ವಹಿಸುತ್ತದೆ ಎಂದರು. ಶಾಲಾ ಆಡಳಿತಾಧಿಕಾರಿ ರವೀಂದ್ರ ದರ್ಬೆರವರು ಪ್ರಾಸ್ತಾವಿಕ ಮಾತುಗಳನ್ನಾಡಿ ವಿದ್ಯಾರ್ಥಿಗಳು ತಮ್ಮ ಪಠ್ಯ ಚಟುವಟಿಕೆಗಳ ಜೊತೆಗೆ ಸಹಪಠ್ಯ ಚಟುವಟಿಕೆಗಳಲ್ಲೂಕೌಶಲ್ಯ ಭರಿತ ಕಲಿಕೆಯನ್ನು ನಡೆಸುವಲ್ಲಿ ಪೋಷಕರ ಸಹಕಾರ ಅತಿ ಅಗತ್ಯ. ಅದೇ ರೀ ತಿ ವಿದ್ಯಾರ್ಥಿಗಳು ಕಲಾತಪಸ್ವಿಗಳಾಗಲು ತಾಳ್ಮೆ ಮತ್ತು ನಿರಂತರ ಅಭ್ಯಾಸ ಅತ್ಯಗತ್ಯ ಎಂದರು.ಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ವಿ. ಶೆಟ್ಟಿರವರು ವಿದ್ಯಾರ್ಥಿಗಳಿಗೆ ಶುಭ ಹಾರೈ ಸಿದರು.
ವೇದಿಕೆಯಲ್ಲಿ ಕರಾಟೆ ತರಬೇತುದಾರ ಮೋಹನ್ ಹಾಗೂ ಚಿತ್ರಕಲಾ ತರಬೇತುದಾರರು, ಶಾಲಾ ಚಿತ್ರಕಲಾ ಶಿಕ್ಷಕರಾದಶ್ರೀಕಾಂತ್ ಉಪಸ್ಥಿತರಿದ್ದರು.ಸಹ ಶಿಕ್ಷಕಿಯರಾದ ಹಂಸವೇಣಿ ಹಾಗೂ ಐಡ ಫಿಲೋಮಿನ ಲೋಬೋ ಸಹಪಠ್ಯ ಚಟುವಟಿಕೆಗಳ ವಿವಿಧ ತರಬೇತುದಾರರಪರಿಚಯವನ್ನು ಮಾಡಿದರು.