Friday, January 24, 2025
ಸುದ್ದಿ

ಪಬ್-ಜಿ ಆಡಿ ಮಾನಸಿಕ ಸ್ಥಿಮಿತ ಕಳೆದುಕೊಂಡ ಬಾಲಕ : ನಿದ್ರೆಯಲ್ಲೂ ಫೈರ್ ಫೈರ್ ಚೀರುತ್ತಿದ್ದ – ಕಹಳೆ ನ್ಯೂಸ್

ಜೈಪುರ : ಆನ್ಲೈನ್ ಗೇಮ್ ಪಬ್-ಜಿ ಗೀಳಿಗೆ ಬಿದ್ದಿರುವ ಹದಿನೈದರ ಬಾಲಕನೋರ್ವನು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಘಟನೆ ರಾಜಸ್ಥಾನದ ಅಲ್ವಾರ್‌ನಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಲಕ ಪ್ರತಿನಿತ್ಯ 15ಗಂಟೆಗಳಿಗೂ ಅಧಿಕ ಕಾಲ ಪಬ್-ಜಿ ಆಡುತ್ತಿದ್ದ. ಪರಿಣಾಮ ಆತ ರಾತ್ರಿ ನಿದ್ರೆಯಲ್ಲೂ ಫೈರ್ ಫೈರ್ ಎಂದು ಚೀರುತ್ತಿದ್ದ. ಇತ್ತೀಚಿಗೆ ಆತನಿಗೆ ಗೇಮ್ ಆಡಲು ಮೊಬೈಲ್ ಕೊಡದ ಪರಿಣಾಮ ಆತನ ಕೈ ನಡುಗಲು ಶುರುವಾಗಿದೆ ಎಂದು ಪೋಷಕರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಆಪ್ತ ಸಮಾಲೋಚಕ ಭವಾನಿ ಸಿಂಗ್ ”ಬಾಲಕ ಕಳೆದ ಆರು ತಿಂಗಳುಗಳ ಕಾಲ ನಿರಂತರವಾಗಿ ಫ್ರೀ ಫೈರ್, ಪಬ್-ಜಿ ಆಡಿರುವ ಪರಿಣಾಮ ಆತ ಸಂಪೂರ್ಣ ಆಟದಲ್ಲಿ ತಲೀನನಾಗಿದ್ದಾನೆ. ಆಟದಲ್ಲಿ ಸೋತಾಗ ಕೆಲವರು ಹತಾಶೆಯಿಂದ ಪ್ರಾಣ ಕಳೆದುಕೊಳ್ಳುತ್ತಾರೆ. ಆದರೆ, ಈ ಬಾಲಕನ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆತ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾನೆ.ಅದರAತೆ ಈತ ಆಟದಲ್ಲಿ ತಲ್ಲೀನನಾಗಿ ಊಟವನ್ನು ತ್ಯಜಿಸಿದ್ದು, ರಾತ್ರಿ ನಿದ್ರೆಯಲ್ಲೂ ಫೈರ್ ಫೈರ್ ಎಂದು ಚೀರುತ್ತಾನೆ. ಕೆಲವು ದಿನಗಳಿಂದ ಆಟವಾಡಲು ಮೊಬೈಲ್ ಕೊಡದ ಕಾರಣ ಆತ ಕೈಗಳು ನಡುಗಲು ಆರಂಭವಾಗಿದೆ. ಆತನ ಮೇಲೆ ನಿಗಾಯಿರಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಈತನಿಗಾಗಿ ವಿಶೇಷ ಚಟುವಟಿಕೆಗಳನ್ನು ಏರ್ಪಡಿಸಲಾಗುತ್ತಿದ್ದು, ಆತ ಸೋಲಿನ ಆಘಾತದಿಂದ ಹೊರಬಂದು ಮಾನಸಿಕ ಸಮತೋಲನವನ್ನು ಕಂಡುಕೊಳ್ಳಲು ಚಿಕತ್ಸೆ ನೀಡಲಾಗುತ್ತಿದೆ ಎಂದು ಆಪ್ತ ಸಮಾಲೋಚಕ ಭವಾನಿ ಸಿಂಗ್ ತಿಳಿಸಿದ್ದಾರೆ.