ದೇಶದಲ್ಲಿ ಟೊಮೆಟೊ ದರಗಳು ಪ್ರತಿದಿನ ಹೊಸ ಮೈಲಿಗಲ್ಲುಗಳನ್ನು ದಾಟುತ್ತಿದ್ದು, ವಾರಗಳಿಂದ 100 ರೂಪಾಯಿಗಳ ಗಡಿಯಲ್ಲಿ ಸುಳಿದಾಡುತ್ತಿದೆ, ಅಡುಗೆಮನೆಯ ಮುಖ್ಯ ಉತ್ಪನ್ನಗಳ ಬೆಲೆಯನ್ನು ನಿಯಂತ್ರಿಸಲು ಕೇಂದ್ರ ಸರಕಾರ ಇಂದು ಕ್ರಮಗಳನ್ನು ಪ್ರಕಟಿಸಿದೆ.
ಗ್ರಾಹಕ ವ್ಯವಹಾರಗಳ ಇಲಾಖೆಯು ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಟೊಮೆಟೊಗಳನ್ನು ಖರೀದಿಸಿ , ಟೊಮೆಟೊ ದರದಲ್ಲಿ ಅತಿದೊಡ್ಡ ಜಿಗಿತವನ್ನು ದಾಖಲಿಸಿರುವ ಪ್ರದೇಶಗಳಲ್ಲಿ ವಿತರಿಸಲು ರಾಷ್ಟ್ರೀಯ ಕೃಷಿ ಸಹಕಾರಿ ಮಾರಾಟ ಒಕ್ಕೂಟ ಹಾಗೂ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟವನ್ನು ಕೇಳಿದೆ.
ಇದನ್ನೂ ಓದಿ ಅರಣ್ಯ ಸಂರಕ್ಷಣಾ ಕಾಯಿದೆಯ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದ ಮಾಜಿ ಐಎಎಸ್ ಅಧಿಕಾರಿಗಳುಹೊಸ ಸ್ಟಾಕ್ ಗಳು ಶುಕ್ರವಾರದ ವೇಳೆಗೆ ದಿಲ್ಲಿ-ಎನ್ ಸಿಆರ್ ನಲ್ಲಿ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಲಭ್ಯವಿರುತ್ತವೆ ಎಂದು ಸರಕಾರದ ಹೇಳಿಕೆ ತಿಳಿಸಿದೆ.
ಟೊಮೆಟೊವನ್ನು ಭಾರತದ ಪ್ರತಿಯೊಂದು ರಾಜ್ಯದಲ್ಲಿಯೂ ಬೆಳೆಯಲಾಗುತ್ತದೆ, ದಕ್ಷಿಣ ಮತ್ತು ಪಶ್ಚಿಮ ಪ್ರದೇಶಗಳು ದೇಶದ ಒಟ್ಟು ಉತ್ಪಾದನೆಯ ಸುಮಾರು 60 ಪ್ರತಿಶತವನ್ನು ಹೊಂದಿವೆ. ಇವುಗಳ ಹೆಚ್ಚುವರಿ ಉತ್ಪನ್ನವನ್ನು ನಂತರ ಭಾರತದ ಇತರ ಭಾಗಗಳಿಗೆ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಬಳಸಲಾಗುತ್ತದೆ. ಪ್ರಸ್ತುತ ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಿAದ ಟೊಮೆಟೊ ಪೂರೈಕೆಯಾಗುತ್ತಿದೆ. ದಿಲ್ಲಿ ಹಾಗೂ ಹತ್ತಿರದ ನಗರಗಳು ಹಿಮಾಚಲ ಪ್ರದೇಶ ಹಾಗೂ ಕರ್ನಾಟಕದಿಂದ ದಾಸ್ತಾನುಗಳನ್ನು ಸ್ವೀಕರಿಸುತ್ತಿವೆ ಎಂದು ಸರಕಾರ ತಿಳಿಸಿದೆ.
ಶೀಘ್ರದಲ್ಲೇ ಹೊಸ ಬೆಳೆ ಬರುವ ನಿರೀಕ್ಷೆಯಿದೆ ಮತ್ತು ಮಧ್ಯಪ್ರದೇಶದಿಂದಲೂ ಆಗಮಿಸುವ ನಿರೀಕ್ಷೆಯಿದೆ. ಕ್ರಮವಾಗಿ ಮುಂದಿನ ದಿನಗಳಲ್ಲಿ ಬೆಲೆಗಳು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಸರಕಾರ ಹೇಳಿದೆ.