Thursday, January 23, 2025
ಸುದ್ದಿ

ಯುವತಿಯ ಪ್ರಾಣ ತೆಗೆದ ಮಾವಿನ ಹಣ್ಣು – ಕಹಳೆ ನ್ಯೂಸ್

ಊಟದ ಬಳಿಕ ಮಾವಿನ ಹಣ್ಣು ತಿಂದ ಯುವತಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ಇಂದೋರ್ ಬಳಿಯ ಬಿಜಾಲ್ ಪುರದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅರ್ಚನಾ ಮೃತ ಯುವತಿ. ಜು. 10ರಂದು ರಾತ್ರಿ ಅರ್ಚನಾ ಊಟವಾದ ಬಳಿಕ ಮಾವು ಸೇವಿಸಿದ್ದರು. ಬಳಿಕ ತಡರಾತ್ರಿ ಅವರ ಆರೋಗ್ಯ ಹಠಾತ್ ಹದಗೆಟ್ಟಿತು. ತೀವ್ರ ಸುಸ್ತು ಮತ್ತು ತಲೆನೋವಿನಿಂದ ಅಸ್ವಸ್ಥರಾಗಿದ್ದರು. ಕೂಡಲೇ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ವಿಷಕಾರಿ ಮಾವು ತಿಂದ ಪರಿಣಾಮವೇ ಅರ್ಚನಾ ಸಾವಿಗೀಡಾಗಿದ್ದು ಎಂದು ಕುಟುಂಬಸ್ಥರು ಹೇಳಿದ್ದಾರೆ. ಹಿಂದೆಯೂ ಇಲ್ಲಿ ಮಾವಿನ ಹಣ್ಣು ಸೇವಿಸಿ ಹಲವರು ಅಸ್ವಸ್ಥರಾಗಿದ್ದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಕುಟುಂಬಸ್ಥರ ಹೇಳಿಕೆ ಪಡೆದು ಈಗಾಗಲೇ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.