Thursday, January 23, 2025
ಉಡುಪಿರಾಜಕೀಯಸುದ್ದಿ

ನಿರ್ಮಲ ಸೀತಾರಾಮನ್ ಅವರನ್ನ ಭೇಟಿಯಾದ ಮೀನುಗಾರಿಕೆ ಹಾಗೂ ನೇಕಾರರ ಸಮಿತಿ : ವಿವಿಧ ಬೇಡಿಕೆಗಳ ಬಗ್ಗೆ ಚರ್ಚಿಸಿ ಸಹಕಾರಕ್ಕೆ ಕೋರಿಕೆ – ಕಹಳೆ ನ್ಯೂಸ್

ಉಡುಪಿ ಜಿಲ್ಲೆಗೆ ಆಗಮಿಸಿದ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲ ಸೀತಾರಾಮನ್ ರವರನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಮೀನುಗಾರರ ನಿಯೋಗ ಹಾಗೂ ನೇಕಾರರ ನಿಯೋಗ ಮಾನ್ಯ ಸಚಿವರನ್ನು ಭೇಟಿ ಮಾಡಿ ಮೀನುಗಾರಿಕೆ ಹಾಗೂ ನೇಕಾರರ ವಿವಿಧ ಬೇಡಿಕೆಗಳ ಬಗ್ಗೆ ಚರ್ಚಿಸಿ ಸಹಕಾರ ಕೋರಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಡಾ ಕೂರ್ಮಾ ರಾವ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರಸನ್ನ, ಮೀನುಗಾರ ಮುಖಂಡರಾದ ಶ್ರೀ ದಯಾನಂದ ಸುವರ್ಣ, ಶ್ರೀ ಜಯ ಸಿ. ಕೋಟ್ಯಾನ್, ಶ್ರೀ ರಾಮಚಂದ್ರ ಕುಂದರ್, ಶ್ರೀ ಕಿಶೋರ್ ಡಿ. ಸುವರ್ಣ, ನೇಕಾರರ ನಿಯೋಗದ ಮುಖಂಡರಾದ ಶ್ರೀ ರತ್ನಾಕರ ಇಂದ್ರಾಳಿ, ಶ್ರೀ ಜಗದೀಶ್ ಶೆಟ್ಟಿಗಾರ್, ಶ್ರೀ ಮಂಜುನಾಥ ಮಣಿಪಾಲ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು