Thursday, January 23, 2025
ಸುದ್ದಿ

ಗ್ಲೋಬಲ್​ ಮಿಸೆಸ್​​ ಇಂಟರ್​ ನ್ಯಾಷನಲ್​ 2023 ಕಿರೀಟ ಮುಡಿಗೇರಿಸಿಕೊಂಡ ಕುಡ್ಲದ ಸುಂದರಿ -ಕಹಳೆ ನ್ಯೂಸ್

ಮಂಗಳೂರು : ದೆಹಲಿಯಲ್ಲಿ ಗ್ಲೋಬಲ್ ಇಂಡಿಯಾ ಎಂಟರ್‌ಟೈನ್‌ಮೆಂಟ್‌ ಪ್ರೊಡಕ್ಷನ್ಸ್ ಆಯೋಜಿಸಿದ್ದ ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್‌ನ್ಯಾಷನಲ್‌ ಯೂನಿವರ್ಸ್ – 2023 ಸ್ಪರ್ಧೆಯಲ್ಲಿ ಮಂಗಳೂರು ನಗರದ ಶಮಾ ವಾಜಿದ್​​ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ದೇಶದ 22ಕ್ಕೂ ಅಧಿಕ ರಾಜ್ಯದಲ್ಲಿ ನಡೆದ ಆಡಿಷನ್​​ನಲ್ಲಿ ಆಯ್ಕೆಯಾದ ಎಲ್ಲಾ ಸ್ಪರ್ಧಿಗಳನ್ನು ಹಿಂದಿಕ್ಕಿ ಶಮಾ ಈ ಸಾಧನೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸ್ಪರ್ಧೆಯಲ್ಲಿ ಕಿರೀಟಕ್ಕೆ ಮುತ್ತಿಟ್ಟಿರುವ ಶಮಾ 2024ರಲ್ಲಿ ನಡೆಯುವ ಗ್ಲೋಬಲ್​ ಮಿಸೆಸ್​ ಯುನಿವರ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಪ್ರಶಸ್ತಿ ವಿಜೇತ ಶಮಾ ವಾಜಿದ್​​ ಟಾಪ್​ 40ರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದ್ದರು. ಕರ್ನಾಟಕವನ್ನು ಪ್ರತಿನಿಧಿಸಿದ್ದ ಶಮಾ ವಾಜಿತ್​​ ಎಥ್ನಿಕ್​ ರೌಂಡ್​, ಟ್ಯಾಲೆಂಟ್​ ರೌಂಡ್​, ಪೂಲ್​ ರೌಂಡ್​​ ಹೀಗೆ ಎಲ್ಲಾ ರೌಂಡ್​ಗಳಲ್ಲಿ ಮುನ್ನಡೆ ಸಾಧಿಸಿದ ಶಮಾ ಬಳಿಕ ಅಗ್ರ ಟಾಪ್​ 10 ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದಾದ ಬಳಿಕ ಮುಂದಿನ ಎಲ್ಲಾ ಸುತ್ತುಗಳನ್ನು ಜಯಿಸಿದ ಶಮಾ ವಾಜಿದ್​​​ ಬಾಲಿವುಡ್​ ನಟಿ ಮಲೈಕಾ ಅರೋರಾ ಅವರ ಕೈನಿಂದ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 13 ತಿಂಗಳ ಪುಟ್ಟ ಮಗುವನ್ನು ಹೊಂದಿರುವ ಮುಸ್ಲಿಂ ಸಮುದಾಯಕ್ಕೆ ಸೇರಿದ ಶಮಾ ವೃತ್ತಿಯಲ್ಲಿ ಪ್ರೊಫೆಸರ್​. ಶ್ರೀನಿವಾಸ ಆರ್ಕಿಕ್ಟೆಟ್​ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಶಮಾ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಈ ಸಾಧನೆ ಮಾಡಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಫ್ಯಾಶನ್​ ಲೋಕಕ್ಕೆ ಕಾಲಿಡೋದು ಅಂದರೆ ಸುಲಭದ ಮಾತಲ್ಲ. ಆದರೆ ಶಮಾಗೆ ಕುಟುಂಬಸ್ಥರೇ ಸಾಥ್​ ನೀಡಿದ್ದು ಈ ಸಾಧನೆ ಮಾಡಿದ್ದಾರೆ .