Friday, January 24, 2025
ಸುದ್ದಿ

ಪುತ್ತೂರು ಎಸಿ ಗಿರೀಶ್ ನಂದನ್ ವರ್ಗಾವಣೆ ವಿಚಾರ : ಕೆಎಟಿಯಿಂದ ತಡೆ –ಕಹಳೆ ನ್ಯೂಸ್

ಪುತ್ತೂರು ಸಹಾಯಕ ಆಯುಕ್ತರಾಗಿದ್ದ, ಎತ್ತಿನಹೊಳೆ ಯೋಜನೆಯ ಭೂಸ್ವಾಧೀನ ವಿಭಾಗಕ್ಕೆ ವರ್ಗಾವಣೆಗೊಂಡಿದ್ದ ಗಿರೀಶ್ ನಂದನ್ ಅವರ ವರ್ಗಾವಣೆ ಆದೇಶಕ್ಕೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ಪ್ರಾಧಿಕಾರ ಅವಧಿಪೂರ್ವ ವರ್ಗಾವಣೆ ಎಂಬ ನೆಲೆಯಲ್ಲಿ ತಡೆ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗಿರೀಶ್ ನಂದನ್ ಅವರು ಸುಮಾರು ಒಂದೂವರೆ ವರ್ಷದಿಂದ ಪುತ್ತೂರು ಎಸಿ ಆಗಿದ್ದರು. ಅವರ ವರ್ಗಾವಣೆಯ ಬಳಿಕ ಮಂಗಳೂರಿನ ಕೆಎಐಡಿಬಿಯಲ್ಲಿ ಭೂಸ್ವಾಧೀನಾಧಿಕಾರಿಯಾಗಿದ್ದ ಮಹೇಶ್ಚಂದ್ರ ಅವರು ಬಂದು ಅಧಿಕಾರ ವಹಿಸಿಕೊಂಡಿದ್ದಾರೆ. ಇದೀಗ ಕೆಎಟಿಯಿಂದ ವರ್ಗಾವಣೆ ಆದೇಶಕ್ಕೆ ತಡೆ ದೊರೆತಿರುವುದರಿಂದ ಮುಂದಿನ ಬೆಳವಣಿಗೆಗಳನ್ನು ಕಾದುನೋಡಬೇಕಾಗಿದೆ. ಅಡ್ವಕೇಟ್ ವಿಘ್ನೇಶ್ವರ ಯು. ಮತ್ತು ಶ್ರೀನಿವಾಸ ಎಂ.ಎ. ಇವರ ಪರವಾಗಿ ವಾದಿಸಿದ್ದಾರೆ