Friday, January 24, 2025
ಸುದ್ದಿ

ಬಿಹಾರ ಮೂಲದ ಕಾರ್ಮಿಕ ವಿದ್ಯುತ್ ಸ್ಪರ್ಶಿಸಿ ಸಾವು – ಕಹಳೆ ನ್ಯೂಸ್

ಕಾರ್ಕಳ : ಬಿಹಾರ ಮೂಲದ ಕೂಲಿ ಕಾರ್ಮಿಕ ಯುವಕನೋರ್ವ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಘಟನೆ ತಾಲೂಕಿನ ನಿಟ್ಟೆ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಸೌರವ್ ಕುಮಾರ್ ಮೃತ ಯುವಕ.ಕೆಲ ವರ್ಷಗಳ ಹಿಂದೆ ದಿನಗೂಲಿ ಕಾರ್ಮಿಕನಾಗಿ ನಿಟ್ಟೆಗೆ ಬಂದಿದ್ದ ಇವರು ನಿಟ್ಟೆ ಕಾಲೇಜಿನ ಎದುರಿನ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಟ್ಟಡದ ಆಸುಪಾಸಿನಲ್ಲಿ ಮಂಗಗಳ ಕಾಟ ಹೆಚ್ಚಾಗಿತ್ತು. ಅವರು ತಂಗಿದ್ದ ಜಾಗದಿಂದ ಮಂಗಗಳು ಸಾಬೂನು, ಬಟ್ಟೆ ಇತ್ಯಾದಿಗಳನ್ನು ತೆಗೆದುಕೊಂಡು ಬೇರೆಡೆ ಹಾಕುತ್ತಿದ್ದವು. ಶುಕ್ರವಾರವೂ ಕೆಲವು ವಸ್ತುಗಳು ಕಾಣಿಸುತ್ತಿರಲಿಲ್ಲ. ಹೀಗಾಗಿ, ಯುವಕರು ಕಾಣೆಯಾದ ವಸ್ತುಗಳನ್ನು ಹುಡುಕಲು ಟೆರೇಸ್‌ಗೆ ಹೋಗುವ ಸಲುವಾಗಿ ಏಣಿಯನ್ನು ಎತ್ತಿದ್ದಾಗ ವಿದ್ಯುತ್ ತಂತಿ ಏಣಿಗೆ ತಗುಲಿದೆ. ಏಣಿ ಹಿಡಿದಿದ್ದ ಸೌರವ್‌ಗೆ ವಿದ್ಯುತ್ ಸ್ಪರ್ಶವಾಗಿ ಅಲ್ಲೆ ಮೃತಪಟ್ಟಿದ್ದಾನೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.