ಪದ್ಮಶಾಲಿ ನೇಕಾರ ಪ್ರತಿಷ್ಠಾನದ ನಿಯೋಗದಿಂದ ಉಡುಪಿಯಲ್ಲಿ ಕೈಮಗ್ಗದ ನೇಯ್ಗೆ ಮತ್ತು ಉಡುಪಿ ಸೀರೆಗಳ ಪುನಶ್ಚೇತನದ ಬಗ್ಗೆ ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲ ಸೀತಾರಾಮನ್ ಭೇಟಿ – ಕಹಳೆ ನ್ಯೂಸ್
ಉಡುಪಿಗೆ ಭೇಟಿ ನೀಡಿದ ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲ ಸೀತಾರಾಮನ್ ಇವರನ್ನು ಪದ್ಮಶಾಲಿ ನೇಕಾರ ಪ್ರತಿಷ್ಠಾನ, ಉಡುಪಿ ಮತ್ತು ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ವತಿಯಿಂದ ಭೇಟಿ ಮಾಡಲಾಯಿತು. ಉಡುಪಿಯ ಕೈಮಗ್ಗದ ಸೀರೆಗಳು ಮತ್ತು ಬಟ್ಟೆಗಳು ಅತ್ಯುತ್ತಮ ಗುಣಮಟ್ಟವನ್ನು ಹೊಂದಿವೆ.
ಪ್ರಸ್ತುತ ಕಾಲಘಟ್ಟಕ್ಕೆ ಅನುಗುಣವಾಗಿ ಆಧುನಿಕತೆಯನ್ನು ಅಳವಡಿಸಿಕೊಂಡು,ವಿನ್ಯಾಸಗಳನ್ನು ಬದಲಿಸಿ, ಹೊಸತನದ ಬಟ್ಟೆಗಳನ್ನು ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಪೂರೈಸಿ ಎಂಬ ಸಲಹೆಯನ್ನು ಅವರು ನೀಡಿದರು.
ಉಡುಪಿಯಲ್ಲಿ ಕೈಮಗ್ಗದ ನೇಯ್ಗೆ ಉದ್ಯಮ ನಡೆದು ಬಂದ ಹಾದಿ, ಪ್ರಸ್ತುತ ಸ್ಥಿತಿಗತಿ, ಪುನಶ್ಚೇತನಕ್ಕಾಗಿ ಹಮ್ಮಿಕೊಂಡಿರುವ ಕಾರ್ಯ ಯೋಜನೆಗಳ ಬಗ್ಗೆ ಸವಿವರವಾಗಿ ಮನವರಿಕೆ ಮಾಡಿ, ವಿಸ್ತೃತ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿಯ ಶಾಸಕ ಯಶ್ ಪಾಲ್ ಸುವರ್ಣ, ಉಡುಪಿ ಜಿಲ್ಲಾಧಿಕಾರಿ ಶ್ರೀ ಕೂರ್ಮರಾವ್, ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಎಚ್, ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ ಇಂದ್ರಾಳಿ, ನಗರಸಭಾ ಸದಸ್ಯ ಮಂಜುನಾಥ ಮಣಿಪಾಲ್, ಕೇಂದ್ರ ಸರಕಾರದ ಮಾಜಿ ಆರ್ಥಿಕ ಸಲಹೆಗಾರ ಡಾ| ಜಗದೀಶ್ ಶೆಟ್ಟಿಗಾರ್, ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಕುಮಾರ್, ಪ್ರಮುಖರಾದ ವಿಶ್ವನಾಥ್ ಶೆಟ್ಟಿಗಾರ್, ಕೇಶವ ಶೆಟ್ಟಿಗಾರ್, ದೇವರಾಯ ಶೆಟ್ಟಿಗಾರ್, ಅಶೋಕ್ ಶೆಟ್ಟಿಗಾರ್ ಅಲೆವೂರು, ಲಕ್ಷ್ಮಿ ಕಿನ್ನಿಮುಲ್ಕಿ, ರವಿಕಲಾ ಮತ್ತು ಸುಧಾಕರ ಶೆಟ್ಟಿಗಾರ್ ಮಂಗಳೂರು, ಹರೀಶ್ ಶೆಟ್ಟಿಗಾರ್ ಮುಲ್ಕಿ, ಚೇತನ್ ಕಿನ್ನಿಗೋಳಿ ಇವರು ಉಪಸ್ಥಿತರಿದ್ದರು. ಕೈಮಗ್ಗದ ಉಡುಪಿ ಶಾಲು ಹೊದಿಸಿ, ಶ್ರೀಮತಿ ಗೀತಾ ಕೇಶವ ಶೆಟ್ಟಿಗಾರ್ ಮತ್ತು ಶ್ರೀ ಜಗನ್ನಾಥ ಶೆಟ್ಟಿಗಾರ್ ಇವರು ನೇಯ್ದ ಸೀರೆಗಳನ್ನು ನೀಡಿ ವಿತ್ತ ಸಚಿವರನ್ನು ಗೌರವಿಸಲಾಯಿತು.