Recent Posts

Monday, January 27, 2025
ಸುದ್ದಿ

ಬಜಿರೆ ಕೊರಗಜ್ಜನ ಕಟ್ಟೆಗೆ ಬೆಂಕಿ ಪ್ರಕರಣ : 13 ಮಂದಿಯ ವಿರುದ್ಧ ಪ್ರಕರಣ ದಾಖಲು – ಕಹಳೆ ನ್ಯೂಸ್

ವೇಣೂರು : ದೈವದ ಕಟ್ಟೆಗೆ ಬೆಂಕಿ ನೀಡಲು ಕುಮ್ಮಕ್ಕು ನೀಡಿದ 13 ಮಂದಿ ನೈಜ ಆರೋಪಿಗಳ ವಿರುದ್ದ ದೈವನಿಂದನೆ, ಕೊಲೆ ಬೆದರಿಕೆ ಪ್ರಕರಣ ದಾಖಲಾಗಿದೆ. ಬಜಿರೆ ಗ್ರಾಮದ ಬಡಾರು ನಿವಾಸಿಗಳಾದ ಪ್ರದೀಪ್ ಕುಮಾರ್ ಹೆಗ್ಡೆ, ಉಮೇಶ್ ಪೂಜಾರಿ ತಿಮರಡ್ಕ, ಸಂದೀಪ್ ಕುಮಾರ್ ಹೆಗ್ಡೆ, ಪ್ರಸಾದ್, ದಿನೇಶ್ ಪೂಜಾರಿ, ವಿಜಯ ಶೇಖರ, ಮೋಹನಂದ ಪೂಜಾರಿ, ಹರಿಪ್ರಸಾದ್, ಮನುಗೌಡ, ಶ್ರೀಧರ್ ಪೂಜಾರಿ, ವಸಂತಿ ಪೂಜಾರ್ತಿ, ದಯಾನಂದ ಪೂಜಾರಿ, ಹರೀಶ್ ಪೂಜಾರಿ ಎಂಬವರ ಮೇಲೆ ಡಾ.ರಾಜೇಶ್ ಅವರು ವೇಣೂರು ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬಜಿರೆ ಗ್ರಾಮದ ಬಾಡಾರು ಎಂಬಲ್ಲಿ ದಿವಂಗತ ಬಿ.ಡಿ. ಬಂಗೇರ ಯಾನೆ ದೂಜ ಮಾಸ್ಟರವರ ಕುಟುಂಬಸ್ಥರಾಗಿದ್ದು, ಅವರ ಮನೆಯ ಪಕ್ಕದಲ್ಲಿ ಅನಾದಿಕಾಲದಿಂದಲೂ ಇರುವ ಶ್ರೀ ಸ್ವಾಮಿ ಕೊರಗಜ್ಜ ದೈವವನ್ನು ಕುಟುಂಬಸ್ಥರೊಂದಿಗೆ ಸ್ಥಾಪಿಸಿ ಕಾಲಕಾಲಕ್ಕೆ ದೈವಾರಾಧನೆಗೆ ಸಂಬಂಧಿಸಿದ ವಿಧಿ ವಿನಿಯೋಗಾದಿಗಳನ್ನು, ಆರಾಧನೆಯನ್ನು, ಶ್ರದ್ದಾಭಕ್ತಿಯಿಂದ ಆರಾಧಿಸಿಕೊಂಡು ಬರುತ್ತಿದ್ದು, ಯಾವುದೇ ಸಾರ್ವಜನಿಕರ ಹಸ್ತಕ್ಷೇಪ ಇರಲಿಲ್ಲ. ಬಳಿಕ ದೈವ ನುಡಿಯಂತೆ ಮತ್ತು ಬ್ರಾಹ್ಮಣ ಅರ್ಚಕ ವರ್ಗದವರು ತಿಳಿಸಿದಂತೆ ಕುಟುಂಬಸ್ಥರು ಡಾ.ರಾಜೇಶ್ ಅವರ ಅಧ್ಯಕ್ಷತೆಯಲ್ಲಿ ಟ್ರಸ್ಟ್ ವೊಂದನ್ನು ರಚಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದ್ರೆ ಆರೋಪಿ ಪ್ರದೀಪ್ ಹೆಗ್ಡೆ ಎಂಬಾತ ನಮ್ಮ ಸ್ಥಳದಿಂದ ಸುಮಾರು 5 ಕಿ.ಮೀ. ದೂರದಲ್ಲಿ ಸ್ಥಳವೊಂದನ್ನು ಖರೀದಿಸಿ ಅಲ್ಲಿ ವಾಸ ಮಾಡಲು ಪ್ರಾರಂಭಿಸಿದ್ದಾನೆ. ಗ್ರಾಮದ ನಿವಾಸಿಯಾಗಿರದ ಈತ ಇತ್ತೀಚೆಗೆ ಶ್ರೀ ಸ್ವಾಮಿ ಕೊರಗಜ್ಜನ ಕೀರ್ತಿ ಹಾಗೂ ಉದ್ಧಾರವನ್ನು ನಾವು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಸದುದ್ದೇಶದಿಂದ ಡಾ.ರಾಜೇಶ್ ಅವರ ಅಧ್ಯಕ್ಷತೆಯಲ್ಲಿ ಕುಟುಂಬದ ಟ್ರಸ್ಟಿ ಯನ್ನು ಮಾಡುತ್ತಾರೆ ಎಂಬ ವಿಚಾರವನ್ನು ಮನಗಂಡು ಕೆಲವು ಸಾರ್ವಜನಿಕರನ್ನು ಪುಸಲಾಯಿಸಿ ಡಾ.ರಾಜೇಶ್ ಹಾಗೂ ಕುಟುಂಬಸ್ಥರ ವಿರುದ್ಧ ಸಂಚು ರೂಪಿಸಲು ಪ್ರಾರಂಭಿಸಿದ್ದಾನೆ. ಹಾಗೂ ಮನೆಯ ದೈವವನ್ನು ಸಾರ್ವಜನಿಕರಿಗೆ ನೀಡತಕ್ಕದ್ದು ಎಂದು ಪ್ರತಿಪಾದಿಸಲು ಪ್ರಾರಂಭಿಸಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನಲೆಯಲ್ಲಿ ಆರೋಪಿ ಪ್ರದೀಪ್ ಹೆಗ್ಡೆ ಎಂಬಾತ ಸಾರ್ವಜನಿಕ ಹಣ ಸಂಗ್ರಹಣೆ ಹಾಗೂ ಮೋಸ ವಂಚನೆ ಮಾಡುವ ದುರುದ್ದೇಶದಿಂದ ತನ್ನ ಸಂಗಡಿಗರೊಂದಿಗೆ ಸೇರಿಕೊಂಡು ಕುಟುಂಬಸ್ಥರ ಗಮನಕ್ಕೆ ತರದೇ ಸುಳ್ಳು ನಕಲಿ ಟ್ರಸ್ಟ್ ಅನ್ನು ರಚಿಸಿ ತಾನೇ ಅಧ್ಯಕ್ಪನೆಂದು ಘೋಷಿಸಿಕೊಂಡು ಹಾಗೂ ಆತನ ಸ್ವಂತ ತಮ್ಮ ಪ್ರಧಾನ ಕಾರ್ಯದರ್ಶಿ ಎಂದು ಘೋಷಿಸಿಕೊಂಡಿದ್ದಾರೆ.

ಡಾ.ರಾಜೇಶ್ ಅವರ ಕುಟುಂಬಕ್ಕೆ ಸಂಬಂದಿಸಿದ ದೈವಕ್ಕೆ ಅಪಪ್ರಚಾರ ಹಾಗೂ ನಂಬಿಕೆಗೆ ಧಕ್ಕೆಯಾಗುವಂತೆ, ಸಾರ್ವಜನಿಕರಿಂದ ಹಣ ಸಂಗ್ರಹಣೆ ಹಾಗೂ ಮೋಸ, ವಂಚನೆ ಮಾಡುವ ದುರುದ್ದೇಶವನ್ನು ಆರೋಪಿಗಳಾದ ಪ್ರದೀಪ್ ಕುಮಾರ್ ಹೆಗ್ಡೆ, ಉಮೇಶ್ ಪೂಜಾರಿ ತಿಮರಡ್ಡ, ಸಂದೀಪ್ ಕುಮಾರ್ ಹೆಗ್ಡೆ, ಪ್ರಸಾದ್, ದಿನೇಶ್ ಪೂಜಾರಿ, ವಿಜಯ ಶೇಖರ, ಮೋಹನಂದ ಪೂಜಾರಿ, ಹರಿಪ್ರಸಾದ್, ಮನು ಗೌಡ, ಶ್ರೀಧರ್ ಪೂಜಾರಿ, ವಸಂತಿ ಪೂಜಾರ್ತಿ, ದಯಾನಂದ ಪೂಜಾರಿ, ಹರೀಶ್ ಪೂಜಾರಿ ಎಂಬವರನ್ನು ಸೇರಿಸಿ, ಅನಧಿಕೃತ ಟ್ರಸ್ಟ್ ಅನ್ನು ರಚಿಸಿಕೊಂಡು ಪ್ರದೀಪ್ ಹೆಗ್ಡೆ ಹಾಗೂ ಆತನ ಸಹಚರರು ಡಾ.ರಾಜೇಶ್ ಹಾಗೂ ಅವರ ಕುಟುಂಬದ ವಿರುದ್ಧ ದ್ವೇಷ ಸಾದಿಸಲು ಪ್ರಾರಂಭಿಸಿದ್ದಾರೆ.

ಇನ್ನು ಜೀರ್ಣೋದ್ದಾರ ಕಾರ್ಯನಿಮಿತ್ತ ಡಾ.ರಾಜೇಶ್ ಹಾಗೂ ಅವರ ಕುಟುಂಬಸ್ಥರು ಮಂಜುನಾಥ ಆಸಣ್ಣರ ಮಾರ್ಗದರ್ಶನದಲ್ಲಿ ಜು. 9 ರಂದು ಪುನರ್ ಪ್ರಶ್ನಾಚಿಂತನೆಯೊಂದನ್ನು ಹಮ್ಮಿಕೊಂಡಿದ್ದು, ಈ ವೇಳೆ ಶ್ರೀ ಕೊರಗಜ್ಜ ದೈವದ ಹಾಗೂ ಗುಳಿಗ ದೈವದ ಸಾನಿಧ್ಯವಿದ್ದು ಈಗಾಗಲೇ ಇರುವ ಕಟ್ಟೆಯಲ್ಲಿ ಅದನ್ನು ವಿಧಿಪೂರ್ವಕವಾಗಿ ಡಾ.ರಾಜೇಶ್ ಅವರ ಕುಟುಂಬಸ್ಥರೇ ಈವರೆಗೆ ನಡೆಸಿಕೊಂಡು ಬಂದಂತೆ ಅನೂಚಾನವಾಗಿ ನಾವೇ ನಡೆಸಿಕೊಂಡು ಬರತಕ್ಕದ್ದೆಂದು ಧಾರ್ಮಿಕ ವಿಧಿ ನಿರ್ಣಯಿಸಿದ್ದಾರೆ. ಈ ಕಾರಣದಿಂದ ಡಾ.ರಾಜೇಶ್ ಅವರ ಕುಟುಂಬಸ್ಥರು ಅನೇಕ ಧಾರ್ಮಿಕ ವಿಧಿ ಹಾಗೂ ಕೆಲಸಕಾರ್ಯಗಳನ್ನು ಈಗಾಗಲೇ ಹಮ್ಮಿಕೊಂಡಿದ್ದಾರೆ.

ಆದರೆ ಪ್ರದೀಪ್ ಹೆಗ್ಡೆ ಹಾಗೂ ಆತನ ಸಂಗಡಿಗರು ನಮ್ಮ ಧಾರ್ಮಿಕ ಕೆಲಸಕಾರ್ಯಗಳನ್ನು ನಿಲ್ಲಿಸಲು ಅನೇಕ ಪ್ರಯತ್ನಗಳನ್ನು ಮಾಡಿದ್ದರೂ, ನಾವು ಕಾನೂನು ಪ್ರಕಾರ ನಡೆದುಕೊಳ್ಳುತ್ತಿರುವುದರಿಂದ ಅದು ಸಫಲವಾಗಿಲ್ಲ. ಮಾತ್ರವಲ್ಲದೇ ದೈವದ ಸ್ಥಳವನ್ನು ಕಾಲಿನಿಂದ ತುಳಿಯುವುದು, ಉಗುಳುವುದು ಹಾಗೂ ಕೊರಗಜ್ಜ ದೈವಕ್ಕೆ ಕೆಲಸ ಕಾರ್ಯಗಳನ್ನು ಮಾಡಲು ಬಿಡುವುದಿಲ್ಲ ಎಂದು ಹೇಳಿಕೆಯನ್ನು ಡಾ.ರಾಜೇಶ್ ಹಾಗೂ ಅವರ ಕುಟುಂಬಸ್ಥರಿಗೆ ಪದೇ ಪದೇ ಜೀವಬೆದರಿಕೆಯನ್ನು ಒಡ್ಡಿದ್ದಾರೆ. ಮಾತ್ರವಲ್ಲದೇ ಆರೋಪಿ ಪ್ರದೀಪ್ ಹೆಗ್ಡೆ ಹಾಗೂ ಆತನ ಸಂಗಡಿಗರು ಮಾಡುತ್ತಾ ಇವರ ಕೊರಗಜ್ಜನಿಗೆ ಶಕ್ತಿಯೇ ಇಲ್ಲ ಎಂದು ದೈವನಿಂದನೆಯನ್ನು ಸಹ ಮಾಡಿದ್ದಾನೆ.

ಆರೋಪಿ ಪ್ರದೀಪ್ ಹೆಗ್ಡೆ ಸೇರಿದಂತೆ ಸಹಚರರು ಸಮಾನ ಉದ್ದೇಶದಿಂದ ಜು.11ರಂದು ಬೆಳಿಗ್ಗೆ ಸುಮಾರು 10.30 ರಿಂದ 11.00 ಗಂಟೆಯ ಮಧ್ಯ ಕಾಲದಲ್ಲಿ ಆರೋಪಿ ವಸಂತಿ ಪೂಜಾರ್ತಿ ಅವರನ್ನು ಮುಂದಿಟ್ಟುಕೊಂಡು ಆರೋಪಿ ಹರೀಶ್ ಪೂಜಾರಿ ಎಂಬಾತನಿಗೆ ಹಾಡು ಹಗಲೇ ವಿಪರೀತ ಮಧ್ಯವನ್ನು ಕುಡಿಸಿ, ಬಳಿಕ ಆತನಿಗೆ ಆರೋಪಿಗಳು ಕುಮ್ಮಕ್ಕು ನೀಡಿ ಆತನಿಂದ ಕೊರಗಜ್ಜನ ಕಟ್ಟೆಯ ಚಪ್ಪರಕ್ಕೆ ಬೆಂಕಿ ಹಚ್ಚಿದ್ದು, ಧಾರ್ಮಿಕ ಕೇಂದ್ರವನ್ನು ಅಪವಿತ್ರಗೊಳಿಸಿ,ಡಾ.ರಾಜೇಶ್ ಮತ್ತು ಕುಟುಂಬಸ್ಥರ ನಂಬಿಕೆಗೆ ದ್ರೋಹ ಉಂಟುಮಾಡಿದ್ದಾರೆ ಎಂದು ಪ್ರಕರಣದಲ್ಲಿ ತಿಳಿಸಿದ್ದಾರೆ.

ಬಳಿಕ ಅರೋಪಿ ವಸಂತಿ ಪೂಜಾರ್ತಿ ಎಂಬವರು ಮಧ್ಯದ ಅಮಲಿನಲ್ಲಿರುವ ಹರೀಶ್ ಪೂಜಾರಿಯ ಪಕ್ಕದಲ್ಲಿ ನಿಂತು ಆತನಿಗೆ ಬೆಂಕಿಯನ್ನು ಸರಬರಾಜು ಮಾಡುವಲ್ಲಿ ಸಹಕರಿಸಿ “ಬೆಂಕಿ ಕೊಡು” ಎಂದು ಪುಸಲಾಯಿಸುತ್ತಾ ಪ್ರಚೋದಿಸಿ ಅರಚಲು ಪಾರಂಭಿಸಿದ್ದಾರೆ. ಈ ವಿಚಾರವನ್ನು ಹಾಗೂ ಬೆಂಕಿ ನೀಡುತ್ತಿರುವ ಪ್ರಕರಣವನ್ನು ಆರೋಪಿಗಳು ವಿಡಿಯೋ ಚಿತ್ರೀಕರಣವನ್ನು ಸಹ ಮಾಡಿದ್ದಾರೆ. ಇದೂ ಅಲ್ಲದೆ ಆರೋಪಿ ಪ್ರದೀಪ್ ಹೆಗ್ಡೆ ಆತನ ಸಹಚರರೊಂದಿಗೆ ಸೇರಿಕೊಂಡು ಜು.10ರಂದು ಜೀರ್ಣೋದ್ದಾರ ಕಾರ್ಯವನ್ನು ದ್ವಂಸ ಗೊಳಿಸಬೇಕು. ಎಲ್ಲಾ ವಿಧದಲ್ಲಿ ಅಡತಡೆ ಒಡ್ಡಬೇಕು” ಎಂದು ತಿಳಿಸುವ ಆಡಿಯೋ ಕ್ಲಿಪ್ ಲಭ್ಯವಾಗಿದೆ.

ಸದ್ಯ ಕೊರಗಜ್ಜನ ಕಟ್ಟೆಗೆ ಬೆಂಕಿ ಹಚ್ಚಿ ಅಪರಾಧವೆಸಗಿ, ಡಾ.ರಾಜೇಶ್ ಹಾಗೂ ಅವರ ಕುಟುಂಬದ ಭಾವನೆಗೆ ನೇರಾನೇರಾ ಧಕ್ಕೆ ಉಂಟು ಮಾಡಿದ್ದು, ಸಧ್ಯ ಈ ಅರೋಪಿಗಳ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಪ್ರಕರಣ ದಾಖಲಿಸಿದ್ದಾರೆ.