Tuesday, November 26, 2024
ಪುತ್ತೂರುಸುದ್ದಿ

ವೀಡಿಯೊ ಚಿತ್ರೀಕರಿಸುತ್ತಿದ್ದ ಪತ್ರಿಕೆಯೊಂದರ ವರದಿಗಾರನ ಮೊಬೈಲ್ ಕಸಿದು ಹಲ್ಲೆ; ಪುತ್ತೂರಿನ ಬಪ್ಪಳಿಗೆ ಮೂಲದ ಅನ್ಯಮತೀಯರಿಂದ ಘಟನೆ- ಕಹಳೆ ನ್ಯೂಸ್

ಪುತ್ತೂರು: ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಅಪಾಯಕಾರಿ ರೀತಿಯಲ್ಲಿ ಮರದ ಗೆಲ್ಲುಗಳನ್ನು ಕಡಿಯುತ್ತಿದ್ದ ಕಾರ್ಮಿಕರ ವಿಡಿಯೋ ಚಿತ್ರಿಕರಿಸುತ್ತಿದ್ದ ಪತ್ರಕರ್ತರೊಬ್ಬರ ಮೊಬೈಲನ್ನು ಕಸಿದ ದುಷ್ಕರ್ಮಿಯೊಬ್ಬ ಅದನ್ನು ನೆಲಕ್ಕೆ ಬಡಿದು ಹುಡಿ ಮಾಡಿದ ಘಟನೆ ಪುತ್ತೂರು ಕಸಬಾ ನಗರ ಠಾಣಾ ವ್ಯಾಪ್ತಿಯ ಬಪ್ಪಳಿಗೆ ಗುಂಪಕಲ್ಲು ಎಂಬಲ್ಲಿ ಜು .15 ರಂದು ಸಂಜೆ ನಡೆದಿದೆ. 

ಜಾಹೀರಾತು
ಜಾಹೀರಾತು
ಜಾಹೀರಾತು

ಬಪ್ಪಳಿಗೆಯಲ್ಲಿರುವ ಗುಂಪಕಲ್ಲು ಅಂಬಿಕಾ ವಿದ್ಯಾಸಂಸ್ಥೆಯ ಸಮೀಪ ಪುತ್ತೂರಿನಿಂದ ಬಲ್ನಾಡು ತೆರಳುವ ರಸ್ತೆಯಲ್ಲಿ ವಿದ್ಯುತ್ ತಂತಿಗಳಿಗೆ ತಾಗುತ್ತಿದ್ದ ಮರದ ಗೆಲ್ಲುಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತಿತ್ತು. ಮೆಸ್ಕಾಂ ನಿಂದ ಈ ಕೆಲಸದ ಗುತ್ತಿಗೆ ಪಡೆದಿರುವ ಕಂಟ್ರಾಕ್ಟರ್ ದಾರನ ಕಾರ್ಮಿಕರು ಈ ಕೆಲಸ ಮಾಡುತಿದ್ದರು. ಆದರೇ ಅವರ್ಯಾರು ಮೆಸ್ಕಾಂ ನ ಮಾನದದಂಡದ ಪ್ರಕಾರ ಅಗತ್ಯ ಸುರಕ್ಷತಾ ಸಾಧನಗಳನ್ನು ಬಳಸಿರಲಿಲ್ಲ. ಅಪಾಯವನ್ನು ಆಹ್ವಾನಿಸುವ. ರೀತಿಯಲ್ಲಿ ವಿದ್ಯುತ್ ತಂತಿಯ ಪಕ್ಕ ಕೆಲಸದಲ್ಲಿ ನಿರತರಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಇದನ್ನು ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಿಜಯವಾಣಿ ಪತ್ರಿಕೆ ಹಾಗೂ ದಿಗ್ವಿಜಯ ವಾಹಿನಿಯ ವರದಿಗಾರ ನಿಶಾಂತ್ ಬಿಲ್ಲಂಪದವು ಅಪಾಯಕಾರಿ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿರುವ ಕುರಿತು ಮೆಸ್ಕಾಂ ಹಿರಿಯ ಅಧಿಕಾರಿಗಳಿಗೆ ತಿಳಿಸಿ ವಿಡಿಯೋ ಚಿತ್ರಿಕರಿಸಿದ್ದಾರೆ. ಆಗಲೇ ಮೆಸ್ಕಾಂ ಸಿಬ್ಬಂದಿಗಳಿಗಬ್ಬರು ಕ್ರೇನ್ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ. ಕೂಡಲೇ ಓರ್ವ ಸ್ಥಳೀಯ ವ್ಯಕ್ತಿ ನಿಶಾಂತ್ ಬಿಲ್ಲಂಪದವು ಅವರ ಕೈಯಿಂದ ಮೊಬೈಲ್ ಕಸಿದು ಅದನ್ನು‌ ಮಾರ್ಗಕ್ಕೆ ಎಸೆದು ಹುಡಿ ಮಾಡಿದ್ದಾರೆ. ಕೊಲ್ಲುವುದಾಗಿ ಜೀವ ಬೆದರಿಕೆಯೊಡ್ಡಿ ಪರಾರಿಯಾಗುವುದಾಗಿ ತಿಳಿದು ಬಂದಿದೆ.

 

ಪ್ರಕರಣ ಎಸಗಿದ ಆರೋಪಿ , ಪುತ್ತೂರು ಪೊಲೀಸರೊಂದಿಗೆ ಸೇರಿಕೊಂಡು ವರ್ಷಂಪ್ರತಿ ನಡೆಯುವ ಅಮರ್ ಅಕ್ಬರ್ ಅಂತೋನಿ ಕ್ರಿಕೆಟ್ ಟೂರ್ನಿಯ ಆಯೋಜಕರ ಪೈಕಿ ಓರ್ವರ ಹತ್ತಿರದ ಸಂಬಂಧಿ ಎಂದು ತಿಳಿದುಬಂದಿದೆ. ಘಟನೆ ನಡೆದಾಗ ಆ ವ್ಯಕ್ತಿಯು ಸ್ಥಳದಲ್ಲಿದ್ದರು.

 

ಪುತ್ತೂರು ಪೊಲೀಸರ ಆತ್ಮೀಯರಾದ ಕ್ರೀಡಾ ಆಯೋಜಕ ಘಟನಾ ಸ್ಥಳದಲ್ಲಿದ್ದರೂ ಪೊಲೀಸರು ಆರೋಪಿಯ ಕುರಿತು ಆತನಿಂದ ಮಾಹಿತಿ ಕಲೆ ಹಾಕಲು ಅಸಡ್ಡೆ ತೋರಿಸುತ್ತಿರುವುದು ಠಾಣೆಯಲ್ಲಿ ಕಂಡು ಬಂದಿದೆ.