Friday, January 24, 2025
ಸುದ್ದಿ

ಬಸ್ – ದ್ವಿಚಕ್ರ ವಾಹನದ ನಡುವೆ ಅಪಘಾತ; ತಂದೆ ಮಗಳಿಗೆ ಗಾಯ – ಕಹಳೆ ನ್ಯೂಸ್

ಮಣಿಪಾಲ : ನಿನ್ನೆ ಸಂಜೆ ಮಣಿಪಾಲ ಟೈಗರ್ ಸರ್ಕಲ್ ಬಳಿ ಖಾಸಗಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಂದೆ ಮಗಳು ಗಾಯಗೊಂಡ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿಯಿಂದ ಮಣಿಪಾಲದತ್ತ ಹೋಗುತ್ತಿದ್ದ ಖಾಸಗಿ ಬಸ್ ಪರ್ಕಳ ಕಡೆ ಹೋಗುತ್ತಿದ್ದ ಟಿವಿಎಸ್ ಮೊಪೆಡ್‌ಗೆ ಟೈಗರ್ ಸರ್ಕಲ್ ಬಳಿ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರ ಅಂಜಾರುವ ಕಾಜಾರಗುತ್ತು ನಿವಾಸಿ ರಮೇಶ ಪ್ರಭು ಹಾಗೂ ಅವರ ಮಗಳು ಶ್ರೀದೇವಿ ಪ್ರಭು ಗಾಯಗೊಂಡಿದ್ದು. ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ.