Friday, January 24, 2025
ಸುದ್ದಿ

ಜಾಹೀರಾತಿನಿಂದ ಸಿಕ್ಕ ಮೊದಲ ಸಂಭಾವನೆಯನ್ನು ಚಾರಿಟಿಗೆ ನೀಡಿದ ನಟ ಮಹೇಶ್ ಬಾಬು ಪುತ್ರಿ ಸಿತಾರಾ – ಕಹಳೆ ನ್ಯೂಸ್

ಚೆನ್ನೈ: ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಮತ್ತು ನಟಿ ನಮ್ರತಾರ ಪುತ್ರಿ ಸಿತಾರಾ ಘಟ್ಟಮನೇನಿ ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆಯಕ್ಟಿವ್ ಆಗಿರುವ ಸಿತಾರಾ, ಅಪ್ಪ-ಅಮ್ಮನಂತೆ ಬಣ್ಣದ ಲೋಕದಲ್ಲಿ ಮಿಂಚುವ ಕನಸು ಹೊಂದಿದ್ದಾರೆ. ಅಪ್ಪ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ರೆ, ಮಗಳು ಚಿಕ್ಕ ವಯಸ್ಸಿನಲ್ಲೇ ಜಾಹೀರಾತಿನ ಮೂಲಕ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮೊದಲ ಸಂಭಾವನೆಯನ್ನು ಒಂದೊಳ್ಳೆ ಕಾರ್ಯಕ್ಕೂ ಬಳಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಿತಾರಾ ಇದೀಗ ಪ್ರೀಮಿಯಂ ಆಭರಣ ಬ್ರ‍್ಯಾಂಡ್‌ನ ರಾಯಭಾರಿಯಾಗಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅತಿ ದೊಡ್ಡ ಜಾಹೀರಾತಿನಲ್ಲಿ ಕಂಗೊಳಿಸುತ್ತಿದ್ದಾರೆ. ಜುಲೈ 4ರಂದು ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್‌ನಲ್ಲಿ ಈ ಜಾಹೀರಾತು ಪ್ರದರ್ಶನಗೊಂಡಿದೆ. ಜಾಹೀರಾತಿಗಾಗಿ ಸಿತಾರಾ ಅವರಿಗೆ 1 ಕೋಟಿ ರೂಪಾಯಿ ಸಂಭಾವನೆ ದೊರೆತಿದೆ ಎಂಬ ಸುದ್ದಿ ಕೇಳಿಬಂದಿತ್ತು. ಇದೀಗ ಹೊಸ ಸುದ್ದಿ ಏನಪ್ಪಾ ಅಂದ್ರೆ, ತಮ್ಮ ಮೊದಲ ಸಂಭಾವನೆಯನ್ನು ಸಿತಾರಾ ಚಾರಿಟಿಗೆ ನೀಡಿದ್ದಾರಂತೆ.

ಜಾಹೀರಾತು
ಜಾಹೀರಾತು
ಜಾಹೀರಾತು