Friday, January 24, 2025
ಸುದ್ದಿ

ಡೇಂಜರ್ ಝೋನಾಗಿ ಪರಿವರ್ತನೆಯಾಗುತ್ತಿದೆ ರಾಷ್ಟ್ರೀಯ ಹೆದ್ದಾರಿ ಬಿ.ಸಿ.ರೋಡ್ – ಕಡೂರು ರಸ್ತೆ : ನಾರಾಯಣ ಗುರು ವೃತ್ತದಿಂದ-ಗಾಣದಪಡ್ಪು ಜಂಕ್ಷನ್‌ವರೆಗೆ ಸಾಗೋದೆ ನಕರಯಾತನೆ – ಕಹಳೆ ನ್ಯೂಸ್

ಬಿ.ಸಿ.ರೋಡ್ : ಬಿಸಿ.ರೋಡ್-ಕಡೂರು ರಾಷ್ಟ್ರೀಯ ಹೆದ್ದಾರಿಯಾಗಿರುವ ಬಿ.ಸಿ.ರೋಡ್ ವೃತ್ತದಿಂದ, ಕೆಲವೇ ಮೀಟರ್ ಅಂತರದಲ್ಲಿ ಗಾಣದಪಡ್ಪುವರೆಗೆ ಡೇಂಜರ್ ಝೋನ್ ಪ್ರದೇಶವಾಗಿರುತ್ತದೆ. ಆದ್ರೆ ಇಲ್ಲಿ ಸುಗಮ ಸಂಚಾರಕ್ಕೆ ಯಾವುದೇ ಮಾರ್ಗಸೂಚಿಯೂ ಇಲ್ಲ. ಪರಿಣಾಮ ಮತ್ತೆ ಮತ್ತೆ ಅಪಘಾತಗಳಾಗ್ತಇದೆ. ಅತೀ ವೇಗದಿಂದ ವಾಹನ ಚಲಾಯಿಸುವ ಕಾರಣ ಆಗುವ ಅಪಘಾತವನ್ನು ನಿಯಂತ್ರಿಸಲು ಬ್ಯಾರಿಕೇಡ್‌ಗಳನ್ನು ಅಳವಡಿಸದ ಟ್ರಾಫಿಕ್ ಪೊಲೀಸ್ ಇಲಾಖೆ ಒಂದೆಡೆಯಾದರೆ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ತಮ್ಮ ಮನೆಗಳಿಗೆ ಹೋಗುವ ಪಾದಚಾರಿಗಳು ಈ ರಸ್ತೆಯಲ್ಲಿ ಹೋಗುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆ ಪುಟ್‌ಪಾತ್ ನ ನಿರ್ಮಿಸಿಲ್ಲ.. ಹೀಗಾಗಿ ವಾಹನ ಸವಾರರು ಮತ್ತು ಪಾದಚಾರಿಗಳು ಈ ಭಾಗದಲ್ಲಿ ಭಯದಿಂದ ಸಂಚಾರ ಮಾಡುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಿ.ಸಿ.ರೋಡು ಗಾಣದಪಡ್ಪುವಿನಿಂದ ಪುಂಜಾಲಕಟ್ಟೆ-ಬಿ.ಸಿ.ರೋಡ್ ಚತುಷ್ಪದ ರಸ್ತೆ ದೂರದ ಪ್ರಯಾಣಕ್ಕೆ ಯೋಗ್ಯವಾದ ರೀತಿಯಲ್ಲಿ ಕಾಮಗಾರಿಯಾಗಿದೆ. ಆದರೆ ಅದೇ ಬಿ.ಸಿ.ರೋಡ್ ಮುಖ್ಯ ವೃತ್ತದಿಂದ ಗಾಣದಪಡ್ಪು ವರೆಗಿನ ಕೆಲವೇ ಮೀಟರ್ ಅಂತರದ ರಸ್ತೆಯು ಈಗ ಅಪಾಯಕಾರಿ ರಸ್ತೆಯಾಗಿ ಪರಿಣಮಿಸಿದೆ. ಮುಖ್ಯ ವೃತ್ತದಿಂದ ನಾಲ್ಕು ಕವಲುಗಳಾಗಿ ಬಂಟ್ವಾಳ ಪೇಟೆ ರಸ್ತೆ, ಬೆಂಗಳೂರು ರಸ್ತೆ, ಪಾಣೆಮಂಗಳೂರು ಪೇಟೆ ರಸ್ತೆಯನ್ನು ಒಳಗೊಂಡಂತೆ ನಾಲ್ಕು ರಸ್ತೆಗಳು ಇದ್ದು, ಬಿ.ಸಿ.ರೋಡ್-ಕಡೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರಂತರ ವಾಹನ ಸಂಚರಿಸುವ ಪ್ರದೇಶವಾಗಿರುತ್ತದೆ. ಮಂಗಳೂರು, ಕಾಸರಗೋಡು, ಮೈಸೂರು, ಬೆಂಗಳೂರಿಂದ ಪ್ರವಾಸಿಗಳಿಗೆ ಧರ್ಮಸ್ಥಳ, ದಾವಣಗೆರೆ, ಮೂಡಬಿದ್ರೆ, ಕಾರ್ಕಳ , ಚಿಕ್ಕಮಗಳೂರು ತೆರಳಲು ಇದೇ ಮುಖ್ಯರಸ್ತೆಯಾಗಿರುತ್ತದೆ. ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಈ ಭಾಗದಲ್ಲಿ ಬಾರೀ ಹೆದರಿಕೆಯಿಂದಲೇ ಸಂಚಾರ ಮಾಡುತ್ತಿದ್ದಾರೆ.

ಗಾಣದಪಡ್ಪು ಬಳಿ ಏಕ ಪಥ ರಸ್ತೆಯಾಗಿದ್ದು ನಾರಾಯಣಗುರು ಸಭಾಂಗಣದಿಂದ ಆರಾಮವಾಗಿ ಪ್ರಯಾಣಿಸಬಹುದಾದರೂ, ಮತ್ತೊಂದು ರಸ್ತೆಯಲ್ಲಿ ಧರ್ಮಸ್ಥಳ-ಮೂಡಬಿದ್ರೆ ರಸ್ತೆಗಳಿಂದ ಬರುವ ವಾಹನಗಳಿಗೆ ರಸ್ತೆಯಲ್ಲಿ ಪ್ರಯಾಣ ಒಳ್ಳೆಯದಾದರೂ ಗಾಣದಪಡ್ಪು ಬಳಿಬರುವಾಗ ಗಲಿಬಿಲಿಯಾಗುತ್ತಾರೆ. ಇಲ್ಲಿ ಯಾವುದೇ ಬ್ಯಾರಿಕೇಡ್ ಇಲ್ಲ, ಮುಂದುಗಡೆ ಒಂದೇ ಪಥದಲ್ಲಿ ಎರಡೂ ಕಡೆಯ ವಾಹನ ಸಂಚಾರದ ಗುರುತೂ ಇಲ್ಲ, ಹತ್ತಿರದಲ್ಲೇ ಪೆಟ್ರೋಲ್ ಪಂಪಿನಿಂದ ವಾಹನಗಳು ಹೆದ್ದಾರಿಗೆ ಬರುವುದು ಎಲ್ಲವೂ ಒಂದೇ ಕಡೆಯಾಗುತ್ತದೆ.

ರಸ್ತೆಯೇ ಮಾರುಕಟ್ಟೆಯಾಗಿರುವ ಬಿ.ಸಿ.ರೋಡ್ ವೃತ್ತ : ನಾರಾಯಣಗುರು ವೃತ್ತದ ಬಳಿ ಸಾಲು ಸಾಲಾಗಿ ಚತ್ರಿ ಮಾರುವವರು, ರೈನ್‌ಕೋಟ್ ವ್ಯಾಪಾರಿಗಳು, ಪ್ಲಾಸ್ಟಿಕ್ ಬಕೆಟ್, ಚೆಯರ್ ಉತ್ಪನ್ನಗಳ ಮಾರಾಟಗಾರರು, ನೇರಳೆಹಣ್ಣು, ರೋಂಬಟ್ ಹಣ್ಣು ಹಂಪಲುಗಳನ್ನು ಮಾರುವವರು ಗ್ರಾಹಕರ ಗಮನ ಅವರತ್ತ ಸೆಳೆಯಲು ಹೆದ್ದಾರಿ ರಸ್ತೆಯಲ್ಲೇ ಮಾರಾಟಕ್ಕಿಟ್ಟಿದ್ದಾರೆ. ವಾಹನ ಸವಾರರು ಹೆದ್ದಾರಿ ರಸ್ತೆಯಲ್ಲೇ ನಿಲ್ಲಿಸಿ ವ್ಯವಹಾರ ಮಾಡುತ್ತಾ ಇರುತ್ತಾರೆ. ನಾರಾಯಣ ಗುರು ವೃತ್ತದ ಬಳಿ ಇರುವ ಪೊಸಳ್ಳಿ ಕುಲಾಲ ಭವನ ರಸ್ತೆಯ ತಿರುವಿನಲ್ಲೂ ಸಾಲು ಸಾಲಾಗಿ ವಾಹನಗಳು ನಿಂತಿರುವುದರಿಂದ ವಾಹನ ಸವಾರರಿಗೆ ಸ್ಥಳದ ಇಕ್ಕಟ್ಟು ಹಾಗೂ ಎದುರುಗಡೆ ಬರುವ ವಾಹನಗಳ ಬರುವಿಕೆ ಗೊತ್ತಾಗದೇ ಗೊಂದಲವಾಗುತ್ತದೆ. ಹೀಗಾಗಿ ಅಸ್ತವ್ಯಸ್ತವಾಗಿರುವ ರಸ್ತೆಯಿಂದ ನಿರಂತರ ಅಫಘಾತಗಳು ಸಂಭವಿಸುತ್ತಾ ಇರುತ್ತದೆ. ಈ ಅವ್ಯವಸ್ಥೆಯಿಂದಾಗಿ ಕೆಲವು ಅಪಘಾತಗಳಲ್ಲಿ ದ್ವಿಚಕ್ರ ವಾಹನಗಳ ಸವಾರರರು ಮೃತರಾದ ಘಟನೆಯೂ ನಡೆದಿದೆ.

ಟ್ರಾಫಿಕ್ ಇಲಾಖೆಯ ವೈಪಲ್ಯ : ನಿರಂತರ ವಾಹನಗಳ ಸಂಚಾರವಿರುವ ಈ ನಾರಾಯಣ ಗುರು ವೃತ್ತದಿಂದ ಗಾಣದಪಡ್ಪು  ವರೆಗೆ ಟ್ರಾಫಿಕ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ, ವೃತ್ತದ ಬಳಿ ಅಥವಾ ಗಾಣದ ಪಡ್ಪು ವೃತ್ತಕ್ಕೆ ಬರುವ ಮುಂಚೆ ಯಾವುದೇ ರಸ್ತೆ ವಿಭಜಕ ಇದೆ ಎಂಬ ಮಾರ್ಗ  ಸೂಚಿ ಅಳವಡಿಸಿಲ್ಲ, ಯಾವುದೇ ಬ್ಯಾರಿಕೇಡ್ ಅಳವಡಿಸಿಲ್ಲ, ನಿರಂತರ ಅಪಘಾತವಾಗುವ ಸ್ಥಳವಾದರೂ ಇಲ್ಲಿ ಸುಗಮ ಸಂಚಾರಕ್ಕೆ ಯಾವುದೇ ಸಿಬ್ಬಂದಿಯನ್ನು ನೇಮಿಸಿರುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಜನರಿಗಾಗಿ ಇಲ್ಲವೇ ವಾಹನ ಸವಾರರಿಗೆ ಪ್ರಯೋಜನವಾಗುವಂತಹ ಕೆಲಸ ಮಾಡಿಲ್ಲ. ನೂತನವಾಗಿ ರಸ್ತೆಯಿಂದ ಪಾರ್ಕ್ ಬಳಿ ಸ್ಥಳಾವಕಾಶ ಇದ್ದರೂ ಸುಗಮ ಸಂಚಾರಕ್ಕೆ ರಸ್ತೆ ಅಗಲೀಕರಣ ಮಾಡಿಲ್ಲ.