ಬಂಟ್ವಾಳ : ಕಳೆದ ವಾರ ಸುರಿದ ಭಾರೀ ಮಳೆಗೆ ಲೋಕಪಯೋಗಿ ಇಲಾಖೆಗೆ ಸಂಬಂಧಿಸಿದ ರಸ್ತೆಗೆ ಗುಡ್ಡ ಜರಿದು ಹಾನಿಯಾಗುವ ಸಂಭವವಿದೆ. ರಸ್ತೆಯ ಬದಿಯಲ್ಲೇ ಇರುವ ಕೆಂಪುಗುಡ್ಡೆಯ ಗುಡ್ಡಪ್ರದೇಶ ಬಿರುಕು ಬಿಟ್ಟಿದ್ದು, ರಸ್ತೆಯಿಂದ ಕೆಳಗೆ ಇಳಿಜಾರು ಪ್ರದೇಶದಲ್ಲಿ ವಾಸ್ತವ್ಯ ಇರುವ ಮನೆಗಳು, ಕೃಷಿಭೂಮಿ ಅಪಾಯದಲ್ಲಿದೆ. ರಸ್ತೆ ಬದಿಯಲ್ಲಿ ಉದ್ದಕ್ಕೆ ಸುಮಾರು 500 ಮೀಟರ್ ಉದ್ದದಲ್ಲಿ ಗುಡ್ಡ ಬಿರುಕು ಬಿಟ್ಟಿದೆ. ಅಷ್ಟು ಮಾತ್ರವಲ್ಲೇ ಗುಡ್ಡದ ನೇರ ಭಾಗದಲ್ಲೂ ಗುಡ್ಡ ಇಬ್ಬಾಗವಾಗಿರುವುದು ಕಾಣಿಸಿದೆ.
ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಜಗದಂಬಿಕಾ ಭಜನಾ ಮಂದಿರದ ಸಮೀಪದ ಗುಡ್ಡ ಬಿರುಕು ಕಂಡು ಬಂದಿದ್ದು, ಈ ಭಾಗದಲ್ಲಿ ಸಂಚರಿಸುವ ಗ್ರಾಮಸ್ಥರು ಆತಂಕಕ್ಕೊಳಪಟ್ಟಿದ್ದಾರೆ. ಕೆಲವು ವರ್ಷಗಳ ಹಿಂದೆ ಗುಡ್ಡವನ್ನು ಸಮತಟ್ಟು ಮಾಡಿದ ಪರಿಣಾಮ ಗುಡ್ಡದ ಮತ್ತೊಂದು ಬದಿಯಲ್ಲಿ ಗುಡ್ಡ ಬಿರುಕು ಬಿಟ್ಟಿದೆ. ಗುಡ್ಡೆ ಬಿರುಕು ಕಂಡು ಬಂದAತೆ ಅಮ್ಟಾಡಿ ಪಂಚಾಯತ್‌ನಿAದ ಸಾರ್ವಜನಿಕರಿಗೆ ತಿಳಿಯಪಡಿಸಲು ರಸ್ತೆ ಇರುವ ಎರಡು ಬದಿಯಲ್ಲೂ ಸೂಚನಾ ಫಲಕವನ್ನೂ ಹಾಕಿದ್ದಾರೆ. ಅಜೆಕಲ-ಕೆಂಪುಗುಡ್ಡೆ-ಕಲ್ಪನೆ ರಸ್ತೆ ಕಾಮಗಾರಿಗೆ ಕೇಂದ್ರೀಯ ರಸ್ತೆ ನಿಧಿ ಯೋಜನೆಯಡಿ 2013ರಲ್ಲಿ ಸುಮಾರು 4 ಕೋಟಿ ಅನುದಾನದ ಮೂಲಕ ಅಭಿವೃದ್ಧಿ ಮಾಡಲಾಗಿತ್ತು.
ಬಂಟ್ವಾಳ ಉಪವಿಭಾಗದ ಲೋಕೋಪಯೋಗಿ ಇಲಾಖೆಗೆ ಸೇರಿದ ಸುಸಜ್ಜಿತ ರಸ್ತೆಗೆ ಗುಡ್ಡದಿಂದ ನೀರು ನಿರಂತರವಾಗಿ ಇಳಿದು ಬರುವುದರಿಂದ ರಸ್ತೆಯೂ ಹಾಳಾಗಿರುತ್ತದೆ. ಅತ್ಯಂತ ಉಪಯೋವಾಗುವ ರಸ್ತೆ ಇದಾಗಿದ್ದು ಸಂಪರ್ಕದ ಕೊಂಡಿಯಾಗಿದೆ.ಈ ಭಾಗದಿಂದ ಕಲ್ಪನೆಗೆ ಕೇವಲ 8 ಕಿ.ಮೀ. ದೂರ ಇರುವುದು. ಇಲ್ಲಿಂದ ಬೆಂಜನಪದವು ಮಾರ್ಗವಾಗಿ ನೀರುಮಾರ್ಗ-ಮಂಗಳೂರು, ಫರಂಗಿಪೇಟೆ-ಮAಗಳೂರು ತಲುಪಬಹುದು. ಅದೇ ರೀತಿ ಪುಣ್ಯ ಕ್ಷೇತ್ರಗಳಾದ ಕಲ್ಪನೆ-ಪೊಳಲಿ, ಕಟೀಲು ಹಾಗೂ ಬಜಪೆ ವಿಮಾನ ನಿಲ್ದಾಣವನ್ನೂ ತಲುಪಬಹುದು. ಬಂಟ್ವಾಳ ಹಾಗೂ ಸುತ್ತಲಿನ ಗ್ರಾಮೀಣ ಪ್ರದೇಶದ ಜನರಿಗೆ ಬಿ.ಸಿ.ರೋಡು ಹೋಗುವ ಬದಲು ಈ ಮಾರ್ಗವಾಗಿ ಮೇಲಿನ ಸ್ಥಳಗಳನ್ನು ತಲುಪುವುದು ಸುಲಭ ಸಾಧ್ಯವಾಗಿದೆ.
ಅಮ್ಟಾಡಿ ಗ್ರಾಮದ ಈ ರಸ್ತೆ ಗ್ರಾಮೀಣ ಭಾಗದಲ್ಲಿ ಮುಖ್ಯ ರಸ್ತೆಯಾಗಿರುತ್ತದೆ. ಈ ರಸ್ತೆಯಲ್ಲಿ ಯಾವುದೇ ಬಸ್ಸಿನ ವ್ಯವಸ್ಥೆ ಇಲ್ಲದಿದ್ದರೂ ಅಟೋ ರಿಕ್ಷಾದ ಮೂಲಕ ಪ್ರಯಾಣ ಮಾಡುತ್ತಾರೆ. ಖಾಸಗಿ ಸ್ಥಳವಾದರೂ ಹಚ್ಚ ಹಸುರಾಗಿರುವ ಕೆಂಪುಗುಡ್ಡ ಪ್ರದೇಶವನ್ನು ಉಳಿಸಿಕೊಳ್ಳುವುದು ಜನರ ಕರ್ತವ್ಯ. ಗುಡ್ಡದ ಮೇಲೆ ಮಣ್ಣು ಅಗೆತ, ಗುಡ್ಡ ಒಂದು ಬದಿಯಿಂದ ಕುಸಿಯಲು ಪ್ರಾರಂಭವಾದರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮಳೆ ಕೇವಲ ನಾಲ್ಕು ದಿನ ಬಂದಿರುವುದು. ಜೋರು ಮಳೆ ಇನ್ನು ಬರಬೇಕಷ್ಟೆ. ಮಳೆಯು ಎಡೆಬಿಡದೆ ಸುರಿಯಲು ಆರಂಭವಾದರೆ ಮಾತ್ರ ಅಪಾಯ ಕಟ್ಟಿಟ್ಟ ಬುತ್ತಿ.
ಕೆಂಪುಗುಡ್ಡೆಯಲ್ಲಿ ಬಿರುಕು ಕಂಡು ಬಂದಿರುವುದರಿAದ ಅಮ್ಟಾಡಿ ಪಂಚಾಯತ್‌ನಿoದ ರಸ್ತೆಯ ಎರಡೂ ಬದಿಗಳಲ್ಲಿ ಸಾರ್ವಜನಿಕರಿಗೆ ಗೊತ್ತಾಗುವಂತೆ ಬ್ಯಾನರ್ ಅಳವಡಿಸಲಾಗಿದೆ. ಲೋಕೋಪಯೋಗಿ ಇಲಾಖೆಗೆ ಗಮನ ತಂದಿದ್ದು, ಇಂಜಿನಿಯರ್ ಸ್ಥಳಕ್ಕೆ ಆಗಮಿಸಿ ಬಿರುಕು ಪರಿಶೀಲನೆ ಮಾಡಿದ್ದಾರೆ. ಮಳೆ ಕಡಿಮೆಯಾದ ನಂತರ ರಸ್ತೆ ಹಾಳಾಗದಂತೆ ಸೂಕ್ತ ಕ್ರಮ ಜರಗಿಸುವುದೆಂದು ತಿಳಿಸಿದ್ದಾರೆ.
ಸುನೀಲ್ ಬಿ., ಉಪಾಧ್ಯಕ್ಷರು, ಅಮ್ಟಾಡಿ ಗ್ರಾಮ ಪಂಚಾಯತ್
ಕಳೆದ ವರ್ಷವೇ ಈ ಸ್ಥಳದಲ್ಲಿ ರಸ್ತೆಯ ಬದಿಯಲ್ಲಿ ಬಿರುಕು ಬಿಟ್ಟಿರುತ್ತದೆ. ಗುಡ್ಡದಿಂದ ನಿರಂತರವಾಗಿ ರಸ್ತೆಯಲ್ಲೇ ನೀರು ಸಂಚರಿಸುತ್ತಿದೆ. ದಿನಂಪ್ರತಿ ಇದೇ ರಸ್ತೆಯಲ್ಲಿ ನಾವು ದ್ವಿಚಕ್ರ ವಾಹನದ ಮುಖಾಂತರ ಸಂಚರಿಸುತ್ತಾ ಇದ್ದೇವೆ. ಯಾವುದೇ ಗಂಡಾAತರ ಬಾರದಂತೆ ಈ ಮಳೆಗಾಲ ಕಳೆಯಲಿ ಎಂಬುದೇ ನಮ್ಮ ಆಶಯ.