Friday, January 24, 2025
ಸುದ್ದಿ

ನೀರ್ಕೆರೆ ಪ್ರಾ.ಶಾಲೆಯಲ್ಲಿ ಮಾದಕ ವಸ್ತುಗಳ ಸೇವನೆ ತಡೆಗಟ್ಟುವಿಕೆ ಕಾರ್ಯಗಾರ – ಕಹಳೆ ನ್ಯೂಸ್

ಮೂಡುಬಿದಿರೆ : ತೆಂಕಮಿಜಾರು ಗ್ರಾ.ಪಂ.ವ್ಯಾಪ್ತಿಯ ಸ. ಹಿ. ಪ್ರಾ. ಶಾಲೆ ನೀರ್ಕೆರೆ ಇಲ್ಲಿ ರಸ್ತೆ ಸುರಕ್ಷತಾ ಕ್ರಮ ಮತ್ತು ಮಾದಕ ವಸ್ತುಗಳ ಸೇವನೆ ತಡೆಗಟ್ಟುವಿಕೆ ಕುರಿತು ಮಾಹಿತಿ ಕಾರ್ಯಗಾರ ಶನಿವಾರ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಡುಬಿದಿರೆ ಪೊಲೀಸ್ ಠಾಣೆಯ ಕ್ರೈಂ ವಿಭಾಗದ ಉಪ ನಿರೀಕ್ಷಕ ದಿವಾಕರ ರೈ ಅವರು ಮಾಹಿತಿ ನೀಡಿ ಪೊಲೀಸ್ ಎಂದರೆ ಭಯ ಅಲ್ಲ ಅದೊಂದು ಭರವಸೆ. ಪೊಲೀಸರು ಇದ್ದಾರೆ ಎಂದರೆ ನಮಗೆ ಅಭದ್ರತೆ ಕಾಡುವುದಿಲ್ಲ. ಯುವಜನತೆ ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಿರಬೇಕಾದರೆ ಅವರು ಮಾದಕ ವಸ್ತುಗಳಿಗೆ ಬಲಿಯಾಗಬಾರದು. ಯುವಜನತೆ ಮಾದಕ ವ್ಯಸನಿಗಳಾದರೆ ಅನಾರೋಗ್ಯ ಕಾಡುತ್ತದೆ, ಸಮಾಜದಲ್ಲಿ ಗೌರವ ಕಡಿಮೆಯಾಗುತ್ತದೆ.
ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಕಾನೂನಿನ ಶಿಕ್ಷೆಯಾಗುತ್ತದೆ ಇದಲ್ಲದೆ ದೇಶವೂ ನಾಶವಾಗುತ್ತದೆ ಆದ್ದರಿಂದ ನಿಮ್ಮನ್ನು ನೀವು ಕಾಪಾಡಿಕೊಂಡು ಉತ್ತಮ ಪ್ರಜೆಗಳಾಗಿ ಬಾಳಿ ಎಂದ ಅವರು ಮಕ್ಕಳು ಪರವಾನಿಗೆ ಇಲ್ಲದೆ ವಾಹನವನ್ನು ಚಲಾಯಿಸದಿರಿ. ಇನ್ಸೂರೆನ್ಸ್ ಮಾಡಿಸಿಕೊಳ್ಳಿ ಹಾಗೂ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಕಡ್ಡಾಯವಾಗಿ ಹೆಲ್ಮೆಟ್ ಬಳಸಿ ನಿಮ್ಮ ಮನೆಯವರಿಗೂ ತಿಳಿಸಿ ಎಂದು ಸಲಹೆ ನೀಡಿದರು. ಪೊಲೀಸ್ ಸಿಬಂಧಿ ಅರುಣ್, ಶಾಲಾ ಶಿಕ್ಷಕಿ ಶೈಲಜಾ ಉಪಸ್ಥಿತರಿದ್ದರು.