Recent Posts

Monday, January 20, 2025
ಸುದ್ದಿ

ನಟ ದರ್ಶನ್‍ ಮೈಸೂರು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ – ಕಹಳೆ ನ್ಯೂಸ್

ಮೈಸೂರು: ನಟ ದರ್ಶನ್‍ಗೆ ಆಕ್ಸಿಡೆಂಟ್ ಆಗೀರೋದು ಗೊತ್ತೇ ಇದೆ. ಅಪಘಾತವಾದ ಬಳಿಕ ಆರು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದ ದರ್ಶನ್ ಕಳೆದ ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಡಾಕ್ಟರ್ ಒಂದು ತಿಂಗಳು ವಿಶ್ರಾಂತಿಯನ್ನು ಹೇಳಿದ್ದು, ದರ್ಶನ್ ಈ ನಡುವೆ ತಾಯಿಯ ದೇಗುಲಕ್ಕೆ ಹೋಗಿದ್ದಾರೆ.

ಈಗ ಮೈಸೂರಿನ ದೇವಿ ಚಾಮುಂಡೇಶ್ವರಿಯ ದೇವಲಯಕ್ಕೆ ಭೇಟಿ ನೀಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಜೊತೆಗೆ ಚಾಮುಂಡೇಶ್ವರಿ ಸನ್ನಿಧಿಗೆ ಹೋಗಿ ದರ್ಶನ್ ತಾಯಿಯ ಆಶೀರ್ವಾದ ಪಡೆದುಕೊಂಡು ಬಂದಿದ್ದಾರೆ. ಅಪಘಾತವಾದ ಬಳಿಕ ಆರು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದ ದರ್ಶನ್ ಕಳೆದ ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಡಾಕ್ಟರ್ ಒಂದು ತಿಂಗಳು ವಿಶ್ರಾಂತಿಯನ್ನು ಹೇಳಿದ್ದು, ದರ್ಶನ್ ಈ ನಡುವೆ ತಾಯಿಯ ದೇಗುಲಕ್ಕೆ ಹೋಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದೇವಾಲಯದ ಬಳಿಕ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕರ ನಿವಾಸಕ್ಕೆ ದರ್ಶನ್ ಭೇಟಿ ನೀಡಿ ಕೆಲ ಸಮಯ ಕಳೆದರು. ದರ್ಶನ್ ಚಾಮುಂಡೇಶ್ವರಿ ದೇವಲಯ ಬಂದಿದ್ದ ಫೋಟೋಗಳನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.ಅಪಘಾತದಲ್ಲಿ ದರ್ಶನ್ ಬಲಗೈಗೆ ಪೆಟ್ಟು ಬಿದಿದ್ದು, ಶಸ್ತ ಚಿಕಿತ್ಸೆ ಮಾಡಲಾಗಿತ್ತು. ದರ್ಶನ್ ಇನ್ನೂ ತಮ್ಮ ಕೈಗೆ ಬ್ಯಾಂಡೆಜ್ ಹಾಕಿಕೊಂಡಿದ್ದು, ಆ ಗಾಯ ಪೂರ್ಣ ವಾಸಿಯಾಗಲು ಇನ್ನೂ ಕೆಲ ದಿನಗಳು ಬೇಕಾಗುತ್ತದೆ.