ಯಕ್ಷನಾಟ್ಯ ದಿಂದಲೂ ದೇವರ ಸೇವೆ ಹಾಗೂ ಸಂಸ್ಕಾರ ಸಂಸ್ಕೃತಿ ಸಾಧ್ಯ ; ಕಟೀಲು ಕ್ಷೇತ್ರದ ಅರ್ಚಕ ಶ್ರೀ ಹರಿ ನಾರಾಯಣ ಆಸ್ರಣ್ಣ – ಕಹಳೆ ನ್ಯೂಸ್
ಹಳೆಯಂಗಡಿ: ಯಕ್ಷನಾಟ್ಯ ದಿಂದಲೂ ದೇವರ ಸೇವೆ ಮಾಡಿದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಯಕ್ಷಗಾನ ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಡಿಸಿಕೊಂಡರೆ ಜೀವನದಲ್ಲಿ ಸಂಸ್ಕಾರ ಸಂಸ್ಕೃತಿ ಸಾಧ್ಯ ಎಂದು ಕಟೀಲು ಕ್ಷೇತ್ರದ ಅರ್ಚಕ ಶ್ರೀ ಹರಿ ನಾರಾಯಣ ಆಸ್ರಣ್ಣ ಹೇಳಿದರು.
ಅವರು ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಯಕ್ಷಾರ್ಚನೆ ಕಾರ್ಯಕ್ರಮದ ದೀಪ ಪ್ರಜ್ವಲನಗೊಳಿಸಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಯಕ್ಷಗಾನ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ,ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವ್ಥಾಪನಾ ಸಮಿತಿಯ ಅಧ್ಯಕ್ಷ, ಹರಿದಾಸ್ ಭಟ್, ಸದಾಶಿವ ಡಿ ಶೆಟ್ಟಿಗಾರ್, ಸೀತಾ ಪೂಜಾರಿ,ಅಂಬಿಕಾ ಕಿರಣ್ ಸಿದ್ದು ಪೂಜಾರಿ ದುಬೈ , ಭಾಸ್ಕರ್ ಅಮೀನ್ ತೋಕೂರು,ಗಣೇಶ್ ಪೂಜಾರಿ ಬೆಂಗಳೂರು, ಮತ್ತಿತರರು ಉಪಸ್ಥಿತರಿದ್ದರು.
ನವೀನ್ ಶೆಟ್ಟಿ ಎಡ್ಮೇಮಾರ್ ನಿರೂಪಿಸಿದರು ಯಕ್ಷಾರ್ಚನೆಯ ಬಾಲ ಪ್ರತಿಭೆಗಳಾದ ದಿಯಾ, ದಿಶಾ ಮತ್ತು ದೃಶಾನ್ ರವರನ್ನು ಗೌರವಿಸಲಾಯಿತು. ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಯ ನಾಟ್ಯಭ್ಯಾಸ ಗುರುಗಳಾದ ಯಕ್ಷಮಯೂರ ಶೇಖರ್ ಡಿ ಶೆಟ್ಟಿಗಾರ್ ಮತ್ತು ನಾಟ್ಯಗುರು ಶರತ್ ಕುಡ್ಲ ಶುಭ ಹಾರೈಸಿದರು.