Thursday, January 23, 2025
ಸುದ್ದಿ

ಮಂಗಳೂರು ಮಹಾನಗರ ಪಾಲಿಕೆಯಿಂದ ಜು. 28ರ ವರೆಗೆ ಪ್ಲಾಸ್ಟಿಕ್ ಮುಕ್ತ ಅಭಿಯಾನ – ಕಹಳೆ ನ್ಯೂಸ್

ಮಂಗಳೂರು, ಕೇಂದ್ರ ಪುರಸ್ಕೃತ ಸ್ವಚ್ಛ ಭಾರತ್ ಮಿಷನ್(ನ) 2.0 ಯೋಜನೆಯಡಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜು.28ರ ವರೆಗೆ ಪ್ಲಾಸ್ಟಿಕ್ ಮುಕ್ತ ಅಭಿಯಾನ ಹಮ್ಮಿಕೊಳ್ಳಲಾಗಿದ್ದು.

ಜಾಹೀರಾತು
ಜಾಹೀರಾತು
ಜಾಹೀರಾತು


ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಬ್ಯಾರ‍್ಗಳು, ಪ್ಲಾಸ್ಟಿಕ್ ಬಂಟಿoಗ್ಸ್, ಪ್ಲೆಕ್ಸ್, ಪ್ಲಾಸ್ಟಿಕ್ ಪ್ಲೇಟ್ ಗಳು, ಪ್ಲಾಸ್ಟಿಕ್ ಧ್ವಜಗಳು, ಪ್ಲಾಸ್ಟಿಕ್ ಕಪ್ಗಳು, ಪ್ಲಾಸ್ಟಿಕ್ ಸ್ಪೂನ್ ಗಳು, ಎಲ್ಲಾ ದಪ್ಪದ ಡೈನಿಂಗ್ ಟೇಬಲ್ನಲ್ಲಿ ಹರಡಲು ಬಳಸುವ ಪ್ಲಾಸ್ಟಿಕ್ ಹಾಳೆಗಳು, ಸ್ಟ್ರಾಗಳು, ಥರ್ಮಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಮಣಿಗಳಿಂದ ಮಾಡಿದ ವಸ್ತುಗಳನ್ನು ನಿಷೇಧಿಸಲಾಗಿರುತ್ತದೆ. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು 2016ರ ನಿಯಮ 4(2) ರ ಪ್ರಕಾರ (ತಿದ್ದುಪಡಿಯಂತೆ) “ಪಾಲಿಸ್ಟೆರೀನ್ ಮತ್ತು ವಿಸ್ತರಿತ “ಪಾಲಿಸ್ಟೆರೀನ್ ಸೇರಿದಂತೆ ಮೇಲೆ ತಿಳಿಸಲಾದ ಏಕ ಬಳಕೆಯ ಪ್ಲಾಸ್ಟಿಕ್ (SUP) ತಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ಜುಲೈ 2022 ರಿಂದ ನಿಷೇಧಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಏಕ ಬಳಕೆ ಪಾಸ್ಟಿಕ್ ಉತ್ಪಾದಕರು, ದಾಸ್ತಾನುದಾರರು, ಚಿಲ್ಲರೆ ವ್ಯಾಪಾರಿಗಳು, ಅಂಗಡಿ ಮಾಲೀಕರುಗಳು, ಇ-ಕಾಮರ್ಸ್ ಕಂಪೆನಿಗಳು, ಬೀದಿ ವ್ಯಾಪಾರಿಗಳು, ವಾಣಿಜ್ಯ ಸಂಸ್ಥೆಗಳು ಪ್ಲಾಸ್ಟಿಕ್ ಬದಲಾಗಿ ಪರಿಸರ ಸ್ನೇಹಿ ಪ್ಯಾಕೇಜಿಂಗ್ ಮತ್ತು ಸಾಮಾಗ್ರಿಗಳ ಬಳಕೆ ಮಾಡಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ಪುನರ್ ಬಳಸುವುದು, ಮರುಬಳಕೆ ಮಾಡುವುದು ಮುಂತಾದ ಉತ್ತಮ ಪದ್ಧತಿಗಳನ್ನು ತರುವುದು ಕಡ್ಡಾಯವಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆ, ಸಂಗ್ರಹಣೆ ಮತ್ತು ವಿಲೇವಾರಿಯನ್ನು ಲಾಗ್ಬುಕ್ ನಲ್ಲಿ ದಾಖಲೆ ಮಾಡುವಂತೆ ಸೂಚಿಸಿದೆ.ಈ ಆದೇಶವನ್ನು ಪಾಲಿಸದೆ ನಿಷೇಧಿತ ಪ್ಲಾಸ್ಟಿಕ್ಗಳ ಬಳಕೆ ಮಾಡಿದ್ದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು-2016ರ ನಿಯಮ 4(2) ರ ಪ್ರಕಾರ (ತಿದ್ದುಪಡಿಯಂತೆ) 200ರೂ.ಗಳಿಂದ 20,000ರೂ.ಗಳ ವರೆಗೆ ದಂಡ ವಿಧಿಸಿ, ಪರವಾನಗಿ ರದ್ದುಗೊಳಿಸಲಾಗುವುದು ಹಾಗೂ ಉದ್ಧಿಮೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.