Thursday, January 23, 2025
ಸುದ್ದಿ

ಬಲುಅಪರೂಪ ಬಣ್ಣಹೊಂದಿದ ಆರೋಳಿ ಮೀನು ಪತ್ತೆ! – ಕಹಳೆ ನ್ಯೂಸ್

ಸುರತ್ಕಲ್ ಬಳಿ. ಗುಡ್ಡೆ ಕೊಪ್ಪಳ ಬೀಚ್ ಬಳಿ.ಸಂಜೆಯ ಹೊತ್ತು ನಡೆದುಕೊಂಡು ಹೋಗುವಾಗ ಬಲು ಆಕರ್ಷಣೆಯ ಬಣ್ಣ ಹೊಂದಿದ ಆರೋಳಿ ಮೀನು ಅನುಪಮಾ ಶಿವರಾಂ ರವರ ಗಮನಕ್ಕೆ ಬಂದು ಕಂಡು ಬೆರಗಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನೋಡಲು ಕನ್ನಡಿ ಹಾವಿನಂತಿದ್ದರು ಒಮ್ಮೆ ನೋಡುವಾಗ ಭಯವಾಗುತ್ತದೆ. ಆದರೆ ಈ ಆರೋಳಿ ಮೀನು ಹೆಚ್ಚಾಗಿ ಕೆಂಪು ಬಣ್ಣದಿಂದ ಕೂಡಿರುತ್ತದೆ. ಈ ಮೀನು ಬಣ್ಣ ಮಾತ್ರ ಅಪರೂಪವಾಗಿದೆ.ಹೆಚ್ಚಾಗಿ ಮೀನಿನ ಬಗ್ಗೆ ಸ್ಥಳೀಯವಾಗಿ ಮಾಹಿತಿ ಇರುವ ಮಲ್ಪೆಯ ರೋಹಿತ್ ಮೆಂಡನ್ ಕೊಡವೂರು ಅವರು ಮಾಹಿತಿ ಹೇಳುವ ಪ್ರಕಾರ ಸುರತ್ಕಲ್ ಬಳಿ ಇದನ್ನು ತುಳುವಿನಲ್ಲಿ ಮರಂಚಾ ಮೀನು ಅನ್ನುತ್ತಾರೆ. (ವಿಷದ ಮೀನು ಅನ್ನುತ್ತಾರೆ).

ಮಲ್ಪೆ ಬಳಿ ಇದು ಗಾಳಕ್ಕೆ ಅಪರೂಪಕ್ಕೆಸಿಗುತ್ತದೆ ಕಲ್ಲು ಇರುವ ಪ್ರದೇಶದಲ್ಲಿ ಮಾತ್ರ ಸಿಗುತ್ತದೆ. ಇದರ ಹಲ್ಲು ಹರಿತವಾಗಿರುತ್ತದೆ. ಮತ್ತು ಇದನ್ನು ಯಾರು ಸ್ಥಳೀಯರು ತಿನ್ನುವುದಿಲ್ಲ. ಚೈನಾದವರು ತಿನ್ನುತ್ತಾರೆ. ಎಂದಿದ್ದಾರೆ. ಮೀನಿನ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಇದು ಎಲ್ಲರನ್ನ ಆಕರ್ಷಣೆ ಮಾಡುವಂತಹ ಈ ತರಹ ಬಣ್ಣ ಹೊಂದಿದ್ದು ಬಲು ಅಪರೂಪ ಎಂದು ತಿಳಿಸಿದ್ದಾರೆ.