Thursday, April 17, 2025
ಸುದ್ದಿ

ಕೆಲಸಕ್ಕಿದ್ದ ಮನೆಯಿಂದಲೇ ಕಳ್ಳತನ – ಕಹಳೆ ನ್ಯೂಸ್

ಸುಳ್ಯ : ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಕನ್ನ ಹಾಕಿ ಕಾರ್ಮಿಕನೊಬ್ಬ ಸಿಕ್ಕಿಬಿದ್ದ ಘಟನೆ ಸುಬ್ರಹ್ಮಣ್ಯ ವ್ಯಾಪ್ತಿಯ ಬಳ್ಪದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಳ್ಪದ ಎಣ್ಣೆಮಜಲು ಪುಟ್ಟಣ್ಣ ಅವರ ಮನೆಗೆ ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಮರ್ದಾಳದ ಪ್ರಸಾದ್ ಎಂಬಾತ ಬಂದಿದ್ದು, ಇತ್ತೀಚೆಗೆ ಮನೆ ಮಂದಿ ಕಾರ್ಯಕ್ರವವೊಂದಕ್ಕೆ ಹೊರ ಹೋಗಿದ್ದಾಗ ಕಾರ್ಮಿಕ ಮನೆಯೊಳಗೆ ಹೋಗಿ ಸರ, ಉಂಗುರ, ಮೊದಲಾದ ಚಿನ್ನಾಭರಣ ಹಾಗೂ 8,000 ರೂ. ನಗದು ಕಳ್ಳತನ ನಡೆಸಿದ್ದ. ಮರುದಿನ ಕಾರ್ಮಿಕ ಊರಿಗೆ ತೆರಳಿದ್ದು, ಮನೆಯವರಿಗೆ ಚಿನ್ನ ಮತ್ತು ನಗದು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.

ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸರಿಗೆ ಮಾಹಿತಿ ನೀಡಿ ಕಾರ್ಮಿಕನ ಮನೆಗೆ ತೆರಳಿ ಊರಿನಲ್ಲಿದ್ದ ಆತನನ್ನು ಹಿಡಿದು, ಸುಬ್ರಹ್ಮಣ್ಯ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ವೇಳೆ ಕಳವು ನಡೆಸಿದ್ದು ಒಪ್ಪಿಕೊಂಡಿದ್ದಾನೆ.ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

 

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ