ಮೂಡುಬಿದಿರೆ : ಮುಂಡ್ಕೂರು-ಕಡoದಲೆ ಲಯನ್ಸ್ ಕ್ಲಬ್, ದ.ಕ. ಹಾಲು ಒಕ್ಕೂಟ, ಮುಂಡ್ಕೂರು ಭಾರ್ಗವ ಜೇಸೀಸ್, ಅರಣ್ಯ ಇಲಾಖೆ, ಗ್ರಾಮ ಆರಣ್ಯ ಸಮಿತಿ ಹಾಗೂ ಪಾಲಡ್ಕ ಗ್ರಾಪಂ ಸಂಯುಕ್ತ ಆಶ್ರಯದಲ್ಲಿ ಕಡಂದಲೆ ಹೈಸ್ಕೂಲು ಪರಿಸರದಲ್ಲಿ ವನ ಮಹೋತ್ಸವ ಕಾರ್ಯಕ್ರಮ ನಡೆದಿದೆ.
ದ.ಕ. ಹಾಲು ಒಕ್ಕೂಟದ ಮಾರುಕಟ್ಟೆ ಅಧಿಕಾರಿ ಡಾ. ರವಿರಾಜ ಉಡುಪ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿಶ್ವದೆಲ್ಲೆಡೆ ತಾಪಮಾನ ಏರಿಕೆಗೆ ಕಾಡು ನಾಶವಾಗುತ್ತಿರುವುದೇ ಮೂಲ ಕಾರಣ. ಇದನ್ನು ಹೋಗಲಾಡಿಸಿ ಶುದ್ಧ ಗಾಳಿ, ಜಲ, ಆಹಾರ ಬೆಳೆ ನಮಗೆ ಲಭಿಸಲು ನಾವು ಸಸ್ಯ ಸಂಪತ್ತನ್ನು ಬೆಳೆಸಬೇಕಾಗಿದೆ ಎಂದರು.
ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ, ಪ್ರೌಢಶಾಲೆಯ ಸಂಚಾಲಕ ಕೆ. ಸುದರ್ಶನ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆ ಕಡಂದಲೆ, ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಮಾತನಾಡಿ, ಕೃಷಿ, ಹೈನುಗಾರಿಕೆ ಉಳಿಯಲು, ನೆಲ, ಜಲ, ವನ್ಯ ಸಂಪತ್ತು ಬೇಕು. ಹಿರಿಯರ ಜೊತೆಗೆ ಮಕ್ಕಳೂ ಪ್ರಕೃತಿ ಪ್ರೀತಿಯನ್ನು ಬೆಳೆಸುವುದು ಅವಶ್ಯಕ ಎಂದರು.